ಕೊಪ್ಪ: ಪಟ್ಟಣಕ್ಕೆ ನಿರೋಧಗಿಸುವ ಹುಚ್ಚುರಾಯರ (ಹಿರಿಕೆರೆ) ಕೆರೆಯ ಮೇಲ್ಬಾಗದಲ್ಲಿ ನಿರ್ಮಾಣವಾಗುತ್ತೀರುವ ಖಾಸಗಿ ಲೇಔಟ್ ವಿರೋಧಿಸಿ ನ.16ರ ಶನಿವಾರದಂದು ಕೊಪ್ಪ ಪಟ್ಟಣ ಬಂದ್‌ಗೆ ಕರೆ ನೀಡಲಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಹೊಸೂರು ತಿಳಿಸಿದರು.

ಖಾಸಗಿ ಲೇಔಟ್ ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ಬಿಜೆಪಿ ಈಗಾಗಲೇ ಪ್ರತಿಭಟನೆಯನ್ನು ನಡೆಸಿದೆ. ಸಂಬಂಧಿಸಿದ ಇಲಾಖೆ, ಶಾಸಕರು ಈ ಬಗ್ಗೆ ಎಚ್ಚೆತ್ತು ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದೇವು. ಆದರೇ, ಶಾಸಕರು ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದ ಆರೋಪಿಸಿದ ಅವರು, ಕೊಪ್ಪ ಪಟ್ಟಣದ 1300 ಜನರ ಸ್ವ ಸಹಿ ಸಂಗ್ರಹ ಮಾಡಿ ಲೇಔಟ್ ನಿರ್ಮಾಣಕ್ಕೆ ವಿರೋಧವನ್ನು ವ್ಯಕ್ತ ಪಡಿಸಿದ್ದಾರೆ. ಈ ಹಿನ್ನಲ್ಲೆಯಲ್ಲಿ ಲೇಔಟ್ ನಿರ್ಮಾಣ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ಬಂದ್‌ಗೆ ಕರೆ ನೀಡಿದ್ದೇವೆ ಎಂದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೊಪ್ಪ ಪಟ್ಟಣದಲ್ಲಿ ಸ್ವಯಂ ಪ್ರೇರಿತವಾದ ಬಂದ್ ನಡೆಯಲಿದೆ. ವರ್ತಕರು ಅಂಗಡಿಗಳನ್ನು ಮುಚ್ಚಿ ಬೆಂಬಲಿಸಲಿದ್ದಾರೆ, ಹೋಟೆಲ್ ಸೇರಿದಂತೆ ಇನ್ನಿತರ ಮಳಿಗೆಗಳು ಬಂದ್‌ಗೆ ಬೆಂಬಲವನ್ನು ನೀಡಲಿದ್ದಾರೆ ಎಂದು ತಿಳಿಸಿದರು, ಬಸ್ ನಿಲ್ದಾಣದಲ್ಲಿ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಹುಚ್ಚುರಾಯ ಕೆರೆಯ ನೀರನ್ನು ಸೇವಿಸುವ ಕೊಪ್ಪ ಪಟ್ಟಣದ ವಾಸಿಗಳು ಈ ಬಂದ್‌ಗೆ ಬೆಂಬಲವನ್ನು ನೀಡಬೇಕು, ನೀರು ಕಲುಷಿತವಾಗಲು ಬಿಟ್ಟರೇ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯಿದೆ, ಕೊಪ್ಪದ ಜನತೆಗಾಗಿ ಈ ಬಂದ್‌ಗೆ ಕರೆ ನೀಡಿದ್ದೇವೆ ಎಂದು ತಿಳಿಸಿದರು.