ಕೊಪ್ಪ: ತಾಲೂಕಿನ‌ ಮರಿತೊಟ್ಟಲು ಗ್ರಾಮ ಪಂಚಾಯತಿ ‌ವ್ಯಾಪ್ತಿಯ ಅಂದಗಾರಿನಲ್ಲಿ ಕಾಡಾನೆ ಕಾಣಿಸಿಕೊಂಡಿದೆ. ಸೋಮವಾರ ತನೂಡಿ ಭಾಗದಲ್ಲಿ ಕಾಣಿಸಿಕೊಂಡಿತ್ತು.

ಈಚೇಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ರವರು, ಸಾಕಿದ ಹಸುಗಳನ್ನು ಕಾಡಿಗೆ, ಅರಣ್ಯ ಪ್ರದೇಶಕ್ಕೆ ಮೇಯಲು ಬಿಡಬಾರದು ಎಂದು ಆದೇಶ ಹೊರಡಿಸಿದ್ದರು. ಇದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿತ್ತು.

ಈ ಸಂಬಂಧ ಮಾಜಿ ಸಚಿವ ಡಿ.ಎನ್ ಜೀವರಾಜ್ ಪ್ರತಿಕ್ರಿಯೆ ನೀಡಿದ್ದು, ಹಸುಗಳು ಕಾಡಿಗೆ ಹೋಗಬಾರದು ಎನ್ನುವುದಾದರೇ ಕಾಡು ಪ್ರಾಣಿಗಳು ಸಹ ರೈತ, ಸಾರ್ವಜನಿಕರ ಖಾಸಗಿ ಜಾಗಕ್ಕೆ ಬರಬಾರದು. 

ಈಗ ಕೊಪ್ಪ ತಾಲೂಕಿನ ಅಂದಗಾರಿಗೆ ಕಾಡಾನೆ ಬಂದಿದೆ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಹಾಗೂ ಶಾಸಕರಾದ ರಾಜೇಗೌಡರು ಬಂದು ಆನೆಯನ್ನು ಹೊಡೆದುಕೊಂಡು ಹೋಗಲಿ ಎಂದು ಲೇವಡಿ ಮಾಡಿದ್ದಾರೆ.

ಕಾಡಾನೆ ತನೂಡಿ, ಅಂದಗಾರು ಮುಂತಾದ ಭಾಗದಲ್ಲಿ ಕೃಷಿ ಜಮೀನುಗಳಿಗೆ ದಾಳಿ ಮಾಡಿದ್ದು, ಬೆಳೆ ಹಾನಿಯಾಗಿದೆ. ಅರಣ್ಯ ಇಲಾಖೆ ಸೂಕ್ತ ಕ್ರಮ ವಹಿಸಿ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.