ಕೊಪ್ಪ: ಇಲ್ಲಿನ ಪಟ್ಟಣ ಪಂಚಾಯತಿಯಲ್ಲಿ ಮಂಗಳವಾರ ಲೋಕಾಯುಕ್ತ ದಾಳಿ ನಡೆದಿದ್ದು, ಮುಖ್ಯಾಧಿಕಾರಿ ಚಂದ್ರಕಾಂತ್ ಬಲೆಗೆ ಬಿದ್ದಿದ್ದಾರೆ.

ಶಿವಮೊಗ್ಗ ಮೂಲದ ಗುತ್ತಿಗೆದಾರರ ಬಳಿ ಮುಖ್ಯಾಧಿಕಾರಿ ಲಂಚಕ್ಕೆ ಪೀಡಿಸುತ್ತಿದ್ದ, ಹಿನ್ನೆಲೆಯಲ್ಲಿ ಅವರ ಲೋಕಾಯುಕ್ತದ ಮೊರೆ ಹೊಗಿದ್ದರು.

ಗುತ್ತಿಗೆದಾರ ಗುರುಸಾಯಿ ಎಂಬುವವರು ರಸ್ತೆ ಕಾಮಗಾರಿ ನಡೆಸಿದ್ದರು. ಬಿಲ್ ಹಣ ಪಡೆಯಲು ಚಂದ್ರಕಾಂತ್ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮಂಗಳವಾರ ಹಣವನ್ನ‌ ಪಡೆದುಕೊಳ್ಳುವ ವೇಳೆ ಲೋಕಾ ಬಲೆಗೆ ಬಿದ್ದಿದ್ದಾರೆ.