ಮೂಡಿಗೆರೆ: ಮುಸ್ಲಿಂ ಯುವಕನ ಜೊತೆಯಲ್ಲಿ ಎರಡು ವರ್ಷದ ಹಿಂದೆ ಮದುವೆಯಾಗಿದ್ದ ಯುವತಿ ಪರಾರಿಯಾಗಿದ್ದು, ಬಣಕಲ್ ಪ್ರದೇಶದಕಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದೆ.

ಆಶಿಕ್ ಎಂಬ ಮುಸ್ಲಿಂ ಯುವಕನ ಜತೆಯಲ್ಲಿ 22 ವರ್ಷದ ಪೂಜಾ ಕಳೆದ‌ ಮೂರು ದಿನಗಳ‌ ಹಿಂದೆ ಮನೆಬಿಟ್ಟು ಓಡಿ ಹೋಗಿದ್ದಾಳೆ. ಪತಿಯು ಬಣಕಲ್ ಪೊಲೀಸ್ ಠಾಣೆಗೆ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು.

ಪತಿಯ ದೂರನ್ವಯ ಕಾರ್ಯಚಾರಣೆ ನಡೆಸಿ ಮಹಿಳೆಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಆಗ ಮುಸ್ಲಿಂ ಯುವಕನ ಜೊತೆಗೆ ತೆರಳಿದ ಬಗ್ಗೆ ತಿಳಿದಿದೆ.

ಬಣಕಲ್ ಪೊಲೀಸ್ ಠಾಣೆಯ ಮುಂದೆ ಹಿಂದೂ ಸಂಘಟನೆ ಮುಖಂಡರು  ಹಾಗೂ  ಗ್ರಾಮಸ್ಥರು ಜಾಮಾಯಿಸಿದ್ದು. ಪೊಲೀಸರು ಠಾಣೆಯ ಗೇಟ್ ಹಾಕಿದ್ದಕ್ಕೆ ಆಕ್ರೋಶ‌ ವ್ಯಕ್ತಪಡಿಸಿದ್ದಾರೆ‌. 

ಏಕಾಏಕಿ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆ ನಡೆಸಿ ಹಿಂದೂ ಮುಖಂಡರು ಆಕ್ರೋಶ ಹೊರ ಹಾಕುತ್ತಿದ್ದಂತೆ. ಪೊಲೀಸರು ಸಂಘಟಕರನ್ನ ಮತ್ತು ಗ್ರಾಮಸ್ಥರ ಮನವೋಲಿಸಲು ಹರಸಾಹಸ‌ ಪಟ್ಟರು.