ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತ ಎಣಿಕೆಯಲ್ಲಿ ಲೋಪ ಹಾಗೂ ಚುನಾವಣಾ ಅಕ್ರಮ ನಡೆದಿದೆ ಎಂದು ಮಾಜಿ ಸಚಿವ ಡಿ.ಎನ್ ಜೀವರಾಜ್ ನ್ಯಾಯಾಲಯದ ಮೊರೆ ಹೋಗಿದ್ದರು. ಇದನ್ನ ಪ್ರಶ್ನಿಸಿ ಕೇಸ್ ವಜಾಕ್ಕೆ ಕೇಳಿದ ರಾಜೇಗೌಡರ ಅರ್ಜಿ ಮತ್ತೆ ತಿರಸ್ಕೃತಗೊಂಡಿದೆ.

ಕಳೆದ ವರ್ಷ ಸಹ ರಾಜೇಗೌಡರು ಹೈಕೋರ್ಟ್ ನಲ್ಲಿ‌ ಜೀವರಾಜ್ ಅರ್ಜಿಯನ್ನು ಮಾನ್ಯ ಮಾಡದಂತೆ ಅರ್ಜಿ ಸಲ್ಲಿಸಿದ್ದರು.‌ ಆಗ ಕೋರ್ಟ್ ಜೀವರಾಜ್ ಪರವಾಗಿ ಆದೇಶ ಹೊರಡಿಸಿತ್ತು. ತದನಂತರದಲ್ಲಿ ರಾಜೇಗೌಡರು ಸುಪ್ರೀಂ ಕೋರ್ಟ್ ಕದ ತಟ್ಟಿ ಅಲ್ಲಿಯೂ ಸಹ ಹಿನ್ನಡೆ ಅನುಭವಿಸಿದ್ದರು. ನಂತರದಲ್ಲಿ ಹೈಕೋರ್ಟ್ ಮತ್ತೆ ತಕರಾರು ಅರ್ಜಿ ಸಲ್ಲಿಸಿದ್ದರು ಆಗಲೂ ಸಹ ಹಿನ್ನಡೆಯಾಗಿತ್ತು. ಈಗ ಮತ್ತೆ ಅರ್ಜಿ ವಜಾಕ್ಕೆ ಕೇಳಿ ಮುಖಭಂಗವಾಗಿದೆ.

ಶಾಸಕ ರಾಜೇಗೌಡರು ಈ‌ ಕೇಸ್ ನ ಮೆರಿಟ್ ನ ಮೇಲೆ ವಾದವನ್ನು ಮಾಡದೇ ಪ್ರತಿ ಹಂತದಲ್ಲಿ ಕೇಸ್ ವಜಾಗೊಳಿಸಿ‌ ಎಂದು ಕೇಳುತ್ತಿರುವುದು ಸಾರ್ವಜನಿಕ ವಲಯದಲ್ಲಿ ಅನುಮಾನ ಇನ್ನಷ್ಟು ಗಟ್ಟಿಯಾಗುತ್ತಿದೆ. ಜತೆಗೆ ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ಏನೋ ಇದೆ ಎಂದು ಖಚಿತವಾಗುತ್ತಿದೆ.

ವಿಜಯದಶಮಿ ಸಮಯಕ್ಕೆ ಈ ಪ್ರಕರಣದ ವಿಚಾರಣೆಗಳು ಮುಗಿದು ಕೋರ್ಟ್ ನಿಂದ ತೀರ್ಪು ಹೊರಬಿಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.