Facebook

header logo

ಚಿಕ್ಕಮಗಳೂರು: ಜಿಲ್ಲೆಯ ಹಲವೆಡೆ ಮಳೆ; ರೈತರ ಮೊಗದಲ್ಲಿ ಸಂತಸ


ಜಾಹೀರಾತು/Advertisment

ಜಾಹೀರಾತು/Advertisment

ಜಾಹೀರಾತು/Advertisment
ಚಿಕ್ಕಮಗಳೂರು: ಮಂಗಳವಾರ ಮಧ್ಯಾಹ್ನ ಆಲ್ದೂರು ಪಟ್ಟಣದಲ್ಲಿ  ಗುಡುಗು ಮಿಂಚು ಸಹಿತ ಉತ್ತಮ ಮಳೆಯಾಗಿದೆ. 

ಈ ಪ್ರದೇಶದಲ್ಲಿ ಕಾಫಿ  ಹೂ ಸೆಟ್ ಆಗಲು ಮಳೆಯ ಅವಶ್ಯಕತೆ ಇತ್ತು. ಈ ಮಳೆಯು ಕಾಫಿ ಬೆಳೆಗಾರರ ಮುಖದಲ್ಲಿ ನಗು ಮೂಡಿಸಿದೆ. ಕಳೆದ ತಿಂಗಳು ಉತ್ತಮ ಮಳೆಯಾದ್ದರಿಂದ ಕಾಫಿ ತೋಟಗಳು ಹೂ ಅರಳಿವೆ. ಕಳೆದ 15 ದಿನಗಳಿಂದ ಬಿಸಿಲ ಜಳಕ್ಕೆ ತತ್ತರಿಸಿದ್ದ ಜನತೆಗೆ ಮಳೆರಾಯ ತಂಪೆರಗಿದ್ದಾನೆ.

ಆದರೆ,ಮಳೆಯ ಜೊತೆ ರಭಸವಾಗಿ ಬೀಸಿದ ಗಾಳಿಗೆ ವಿದ್ಯುತ್ ಕಂಬಗಳು ಧರೆಗುರುಳಿದಿದೆ. ಇದರಿಂದ ಆಲ್ದೂರು - ಚಿಕ್ಕಮಗಳೂರು ರಸ್ತೆ ಯಲ್ಲಿ ಮರಗಳು ಮುರಿದು ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು. ರಸ್ತೆ ತೆರವು ಮಾಡಿದ ನಂತರ ವಾಹನ ಓಡಾಟಕ್ಕೆ ಅನುಕೂಲವಾಯಿತು.

ಬಾಳೆಹೊನ್ನೂರಿನಲ್ಲಿಯೂ ಮಳೆ:  
ಬಾಳೆಹೊನ್ನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಂಗಳವಾರ ಮಧ್ಯಾಹ್ನ ಸಾಧಾರಣ ಪ್ರಮಾಣದ ಮಳೆಯಾಗಿದೆ. ಮಧ್ಯಾಹ್ನ ಮೂರು ಗಂಟೆ ವೇಳೆಗೆ ಗುಡುಗು ಸಹಿತ ಆರಂಭಗೊಂಡತು, ಮಳೆ ಸಾಧಾರಣ ಪ್ರಮಾಣದಲ್ಲಿ ಮಳೆ ಸುರಿಯಿತು. ಸತತ ಬಿಸಿಲಿನಿಂದ ಕಂಗೆಟ್ಟಿದ್ದ ಪರಿಸರಕ್ಕೆ ಮಳೆಯಿಂದ ತಂಪೆರದಂತಾಗಿದೆ.

ಜಾಹೀರಾತು/Advertisment

Post a Comment

0 Comments