Facebook

header logo

SSLC RESULT : ಚಿಕ್ಕಮಗಳೂರು ಜಿಲ್ಲೆಗೆ 18ರಿಂದ 10ನೇ ಸ್ಥಾನಕ್ಕೆ ಭಡ್ತಿ | ಜಿಲ್ಲೆಗೆ ಶೃಂಗೇರಿ ಪ್ರಥಮ


ಜಾಹೀರಾತು/Advertisment

ಜಾಹೀರಾತು/Advertisment

ಜಾಹೀರಾತು/Advertisment
ಚಿಕ್ಕಮಗಳೂರು: ಬಹು ನಿರೀಕ್ಷಿತ ಎಸ್. ಎಸ್.ಎಲ್.ಸಿ ಫಲಿತಾಂಶ ಇಂದು ಹೊರಬಿದ್ದಿದೆ. ಚಿಕ್ಕಮಗಳೂರು ಜಿಲ್ಲೆ ಶೇ.83.39ರಷ್ಟು ಫಲಿತಾಂಶ ಗಳಿಸಿ ರಾಜ್ಯದಲ್ಲಿ ಹತ್ತನೇ ಸ್ಥಾನ ಪಡೆದುಕೊಂಡಿದೆ. 
ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಈ ಬಾರಿ ರಾಜ್ಯದಲ್ಲಿ ಶೇ.73.40ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿ ಜಿಲ್ಲೆಯು ರಾಜ್ಯದಲ್ಲಿ 18 ನೇ ಸ್ಥಾನ ಪಡೆದಿತ್ತು ಈ ಬಾರಿ 10 ಸ್ಥಾನಕ್ಕೆ ಭಡ್ತಿ ಪಡೆದಿದೆ.

ಜಿಲ್ಲೆಯಲ್ಲಿ ಒಟ್ಟು 12180 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು,10577 ರಷ್ಟು ಮಂದಿ ಉತ್ತಿರ್ಣರಾಗಿದ್ದಾರೆ. ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ  4986 ರಷ್ಟು ಮಂದಿ ಬಾಲಕರಾಗಿದ್ದು,  5591ರಷ್ಟು ವಿದ್ಯಾರ್ಥಿನಿಯರಿದ್ದಾರೆ. 

ಎಂಟು ತಾಲ್ಲೂಕುಗಳ ಪೈಕಿ  99.08 ರಷ್ಟು ಫಲಿತಾಂಶ ಗಳಿಸಿ ಶೃಂಗೇರಿ ತಾಲೂಕು ಮೊದಲ ಸ್ಥಾನದಲ್ಲಿದ್ದರೆ,  79.08ರಷ್ಟು ಫಲಿತಾಂಶ ಮಾತ್ರವೇ ಗಳಿಸಿ ಕೊನೆಸ್ಥಾನದಲ್ಲಿದೆ. ಇನ್ನುಳಿದಂತೆ ಬೀರೂರು ಶೇ. 80.74 , ಚಿಕ್ಕಮಗಳೂರು ಶೇ.87.08, ಕಡೂರು ಶೇ.84.32, ಕೊಪ್ಪ ಶೇ.96.36 , ಮೂಡಿಗೆರೆ ಶೇ.91.52, ನ.ರಾ.ಪುರ ಶೇ.93.40ರಷ್ಟು ಫಲಿತಾಂಶ ದಾಖಲಿಸಿದೆ.

ಜಾಹೀರಾತು/Advertisment

Post a Comment

0 Comments