ಚಿಕ್ಕಮಗಳೂರು: ಫಾರಂ ನಂ.50,53,57 ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಸಾಗುವಳಿಯನ್ನು ಜಮೀನನ್ನು ಸಕ್ರಮಗೊಳಿಸಲು ಒತ್ತಾಯಿಸಿ ಬಹುಜನ ಸಮಾಜ ಪಕ್ಷದ ಮುಖಂಡರು ಗುರುವಾರ ನಗರದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.
ನೇತಾಜಿಸುಭಾಷ್‍ಚಂದ್ರಬೋಸ್ ಜಿಲ್ಲಾ ಆಟದ ಮೈದಾನದ ಒಂದು ಬದಿಯಲ್ಲಿ ಪ್ರತಿಭಟನೆ ನಡೆಸಿ ಮುಖಂಡರು ಮತ್ತು ಕಾರ್ಯಕರ್ತರು 10 ಲಕ್ಷ ರೈತರ ಬಗರ್‍ಹುಕುಂ ಸಾಗುವಳಿ ಸಕ್ರಮಗೊಳಿಸಬೇಕು. 94ಸಿ,94ಸಿಸಿ ಅಡಿಯಲ್ಲಿ ಮನೆಗಳಿಗೆ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿದರು.
ಭೂಮಿಯನ್ನು ನಂಬಿ ಶೇ.50 ರಷ್ಟು ಜನರು ಬದುಕುತ್ತಿದ್ದಾರೆ. ಶೇ.80ರಷ್ಟಿರುವ ಎಸ್.ಸಿ,ಎಸ್.ಟಿ. ಮತ್ತು ಓಬಿಸಿಗಳು ಇಂದಿಗೂ ಭೂ ರಹಿತ ಕೃಷಿ ಕಾರ್ಮಿಕರಾಗಿದ್ದಾರೆ. ಕಳೆದ 50 ವರ್ಷಗಳಿಂದ ಬಗರ್‍ಹಕುಂ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅವರುಗಳಿಗೆ ಇದುವರೆಗೂ ಭೂ ಮಂಜೂರಾತಿ ದೊರೆತ್ತಿಲ್ಲವೆಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.
ಪರಿಶಿಷ್ಟಜಾತಿ ಮತ್ತು ವರ್ಗದ ಭೂಪರಭಾರೆ ನಿಷೇಧಕಾಯ್ದೆಯ ಮುಖ್ಯವಾದ ಭಾಗವನ್ನು ನಿಷ್ಕ್ರೀಯಗೊಳಿಸಿದ್ದು, ಸಾವಿರಾರು ಮಂದಿ ಬಡವರು ಈಗಾಗಲೇ ಭೂಮಿ ಹಕ್ಕನ್ನು ಕಳೆದುಕೊಂಡಿದ್ದಾರೆ. ಪಿಟಿಸಿಎಲ್ ಕಾಯ್ದೆಗೆ ಸೂಕ್ತ ತಿದ್ದುಪಡಿ ತರುವ ಮೂಲಕ ಪರಿಶಿಷ್ಟಜಾತಿ ಮತ್ತು ವರ್ಗಕ್ಕೆ ಮಂಜೂರಾಗಿರುವ ಭೂಮಿ ಉಳಿಯುವಂತೆ ಸರ್ಕಾರ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು.
ಜಾಹೀರಾತು/Advertisment
![]() |
---|
0 Comments