ಯೂನಿಫಾರಂ ಧರಿಸದೆ ಶಾಲೆಗೆ ಹೋದ್ರೆ ಶಿಕ್ಷಕರು ಬಯ್ಯುತ್ತಾರೆ ಎಂದು ವಿಷ ಸೇವಿಸಿ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಿಂಗದಹಳ್ಳಿ ಗ್ರಾಮದ 8 ನೇ ತರಗತಿಯ ವಿದ್ಯಾರ್ಥಿನಿ ನಿವೇದಿತಾ (13 ) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಲಿಂಗದಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಯೂನಿಫಾರಂ ನೀಡಿದ್ದರು. ಸೋಮವಾರದಿಂದ ತರಗತಿಗೆ ಯೂನಿಫಾರಂ ಧರಿಸಿ ಬರುವಂತೆ ಸೂಚನೆ ನೀಡಿದ್ದರು. ಯೂನಿಫಾರಂ ಹೊಲಿಯಲು
ಟೈಲರ್ ಗೆ ಪಾಲಕರು ನೀಡಿದ್ದರು. ಆದರೇ, ಟೈಲರ್ ಯೂನಿಫಾರಂ ನೀಡಿರಲಿಲ್ಲ. ಶಾಲೆಗೆ ಹೋದ್ರೆ ಶಿಕ್ಷಕರು ಹೊಡೆಯುತ್ತಾರೆ ಎಂದು ವಿಷ ಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಹೀರಾತು/Advertisment
![]() |
---|
0 Comments