ಕೊಪ್ಪ: ಅರಣ್ಯ ಇಲಾಖೆಯ ಕಾನೂನುಗಳಿಂದ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಾಗದೇ ಇರುವ ಮನೆಗಳಿಗೆ ಮುಂದಿನ ದಿನಗಳಲ್ಲಿ ಇಂಧನ ಇಲಾಖೆಯ ವತಿಯಿಂದ ಸೋಲಾರ್ ದೀಪವನ್ನು ನೀಡಲಾಗುತ್ತದೆ ಎಂದು ಸಚಿವ ವಿ. ಸುನೀಲ್ ಕುಮಾರ್ ಭರವಸೆಯ ಮಾತನ್ನಾಡಿದ್ದಾರೆ.
ಬಾಳಗಡಿಯಲ್ಲಿರುವ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಕ್ಷನ್ 4, ಮೀಸಲು ಅರನ್ಯ, ಡೀಮ್ಡ್ ಫಾರೆಸ್ಟ್ ಭಾಗದಲ್ಲಿ ಮನೆ ಕಟ್ಟಿಕೊಂಡು ಜನರು ವಾಸವಿದ್ದರೆ. ಅವರಿಗೆ ಅರಣ್ಯ ಇಲಾಖೆಯ ಕಾನೂನುಗಳಿಂದ ವಿದ್ಯುತ್ ಸೌಲಭ್ಯ ಸಾಧ್ಯವಾಗಿಲ್ಲ. ಅಂತಹ ಮನೆಗಳಿಗೆ ಮುಂದಿನ ದಿನದಲ್ಲಿ ನಮ್ಮ ಇಲಾಖೆಯ ವತಿಯಿಂದ ಸೋಲಾರ್ ದೀಪದ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.
ಮಲೆನಾಡು ಭಾಗದಲ್ಲಿನ ವಿದ್ಯುತ್ ಸಂಕರ್ಪ ಇಲ್ಲದ ಮನೆಗಳ ಬಗ್ಗೆ ಪತ್ರಕರ್ತರು ಸಚಿವ ಗಮನಕ್ಕೆ ತಂದು, ಪಾರ್ಯಾಯ ವ್ಯವಸ್ಥೆಯ ಬಗ್ಗೆ ಪ್ರಶ್ನಿಸಿದರು. ಒಟ್ಟಿನಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೆ ಬೆಳಕು ಕಾಣುವ ಕನಸು ಶೀಘ್ರದಲ್ಲಿಯೇ ಈಡೇರುವ ಸಾಧ್ಯತೆಗಳು ಹೆಚ್ಚಿವೆ.
ಜಾಹೀರಾತು/Advertisment
![]() |
---|
0 Comments