ಶೃಂಗೇರಿ: ಜಿಲ್ಲೆಯ ಮಲೆನಾಡು ಭಾಗಳಲ್ಲಿಯೂ ಬೇಸಿಗೆಯ ಬಿಸಿ ಕಂಗೆಡಿಸುತ್ತಿದೆ. 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಟಿ ಪರದಾಡುವಂತಾಗಿದೆ. ಈ ಹಿನ್ನೆಲೆ ಶ್ರೀ ಜೆ.ಸಿ.ಬಿ.ಎಂ ಕಾಲೇಜಿನ ವಿದ್ಯಾರ್ಥಿಗಳು ಬಾಯರಿದವರಿಗೆ ತಂಪಾಗಿದ್ದಾರೆ.
ಶ್ರೀ ಜೆ.ಸಿ.ಬಿ.ಎಂ ಕಾಲೇಜಿನ ‘ಕಲಾ ಸಂಘ’ದ ವತಿಯಿಂದ ಕಾಲೇಜಿನಲ್ಲಿ ಬಿಸಿಲ ದಣಿವನ್ನು ನೀಗಿಸಲು ಚೇತೋಹಾರಿ ಮಜ್ಜಿಗೆಯನ್ನು ವಿತರಿಸಲಾಗಿದೆ. ಮಜ್ಜಿಗೆ ಕುಡಿದು ಹಲವಾರು ದಣಿವಾರಿಸಿಕೊಂಡಿದ್ದಾರೆ.
ತಲೂಕಿನಲ್ಲಿಯೂ ಬಿಸಿಲ ಝಳ ಜೋರಾಗಿಯೇ ಇದೆ. ಬಾಯಾರಿಕೆ ನೀಗಿಸಿಕೊಳ್ಳಲು ಹಾನಿಕಾರಕ ತಂಪು ಪಾನೀಯ ಕುಡಿಯುವ ಬದಲು ಆರೋಗ್ಯಕಾರಿ ಮಜ್ಜಿಗೆಯನ್ನು ಕುಡಿಯಿರಿ ಎಂಬ ಸಂದೇಶವನ್ನೂ ಈ ಮೂಲಕ ಕೊಟ್ಟಂತಾಗಿದೆ.
ಜಾಹೀರಾತು/Advertisment
![]() |
---|
0 Comments