ಲಿಂಗದಹಳ್ಳಿ: ಕತ್ಲೇಖಾನ್ ಕಾಫೀ ತೋಟದಲ್ಲಿ ಕಾಫಿ ಹಣ್ಣುಗಳ ಕಟಾವು ಕಾರ್ಯಕ್ಕೆ ತೆರಳುತಿದ್ದ ಕೂಲಿ ಕಾರ್ಮಿಕೆ ವಿನೋದಬಾಯಿ (55)ವರ್ಷ ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ತಣಿಗೆಬೈಲು ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ಮೃತ ವಿನೋದಬಾಯಿ ರವರು ಇತರ ಕೆಲಸದವರ ಜತೆಯಲ್ಲಿ ನಡೆದುಕೊಂಡು ಹೋಗುತ್ತೀರುವಾಗ ರಸ್ತೆ ಬದಿಯಲ್ಲಿ ನಿಂತಿದ್ದ ಕಾಡಾನೆ ಏಕಾಏಕಿ ದಾಳಿ ನಡೆಸಿದೆ.
ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಭದ್ರಾ ವನ್ಯಜೀವಿ ತಣಿಗೆಬೈಲು ವಿಭಾಗದ ವಲಯ ಅರಣ್ಯಧಿಕಾರಿ ಸುಧಾಕರ್, ಲಿಂಗದಹಳ್ಳಿ ಪಿ.ಎಸ್.ಐ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಾಹೀರಾತು/Advertisment
![]() |
---|
0 Comments