Facebook

header logo

ಮಳೆ ಹಾನಿ ಪ್ರದೇಶಗಳಿಗೆ ಶಾಸಕ ರಾಜೇಗೌಡ ಭೇಟಿ : ಅಧಿಕಾರಿಗಳೊಂದಿಗೆ ವೀಕ್ಷಣೆ


ಜಾಹೀರಾತು/Advertisment

ಚಿಕ್ಕಮಗಳೂರು: ಕೊಪ್ಪ ತಾಲೂಕಿನ ನೆರೆ ಹಾನಿ ಪ್ರದೇಶಗಳಿಗೆ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ಭೇಟಿ ಪರಿಶೀಲನೆ ನಡೆಸಿದರು. ಈ ವೇಳೆ ಅಧಿಕಾರಿಗಳು ಶಾಸಕರಿಗೆ ಸಾಥ್ ನೀಡಿದರು.

ಮೇಗುಂದ ಹೋಬಳಿಯ ಕೆಲವೆಡೆ ಮಳೆಯ ಅಬ್ಬರಕ್ಕೆ ಧರೆ ಕುಸಿತ‌ ಉಂಟಾದ, ರೈತನ ಜಮೀನಿಗೆ ಹಾನಿಯಾದ ಸ್ಥಳಗಳಿಗೆ ತಹಸಿಸೀಲ್ದಾರ್ ವಿಮಲಾ ಸುಪ್ರಿಯಾ, ತಾ.ಪಂ ಇಒ ನಯನ ಹಾಗೂ ಇತರ ಅಧಿಕಾರಿಗಳ ಜತೆಯಲ್ಲಿ ಭೇಟಿ ನೀಡಿದ್ದಾರೆ.

ಪ್ರಕೃತಿ ವಿಕೋಪ ನಿರ್ವಹಣೆಯ ಕುರಿತು ತಾಲೂಕು ಆಡಳಿತ ಸೌಧದಲ್ಲಿ ನಡೆದ ಸಭೆಯಲ್ಲಿ ಶಾಸಕರು ಅಧಿಕಾರಿಗಳಿಗೆ ಅತಿವೃಷ್ಠಿಯನ್ನು ಎದುರಿಸಲು ಸಿದ್ದರಾಗಿರಬೇಕು. ಜನರಿಗೆ ಸಮಸ್ಯೆಯಾಗದಂತೆ ಕಾರ್ಯ ನಿರ್ವಹಿಸಬೇಕು. ನದಿ, ಹಳ್ಳ ಇರುವ ಕಡೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.


ಜಾಹೀರಾತು/Advertisment

Post a Comment

0 Comments