Facebook

header logo

ಕಿಲಾಡಿ ಲೇಡಿ ಆಟಕ್ಕೆ ಶೃಂಗೇರಿಯ ಅಖಂಡರು-ಮುಖಂಡರು ಸುಸ್ತು ! ಈ ಪೋಟೋ & ಪತ್ರದ ಬಗ್ಗೆ ತನಿಖೆ ಆಗತ್ಯ


ಜಾಹೀರಾತು/Advertisment

ಜಾಹೀರಾತು/Advertisment
ಶೃಂಗೇರಿ: ಹಕ್ಕುಪತ್ರ ವಿಷಯದಲ್ಲಿ ಕಿಲಾಡಿ ಲೇಡಿಯ ಆಟಕ್ಕೆ ಹೆಜ್ಜೆ ಹಾಕುತ್ತಿದ್ದ ಶೃಂಗೇರಿಯ ಅಖಂಡರು- ಮುಖಂಡರು, ಈಗ ಸುಸ್ತಾಗಿ ಹೋಗಿದ್ದಾರೆ. ಆಕೆ ಕುಣಿದಂತೆ ಇವರು ಕುಣಿಯುತ್ತಾ, ಮೇಡಂ... ಮಾಡಿದೆಲ್ಲ ಸರಿ ಎಂದು ಪೋಟೋಗಳಿಗೆ ಪೋಸ್ ಕೊಟ್ಟು ನಿಂತವರು ಇಂದು ಅಕ್ಷರಶಃ ತಂಡಾ ಹೋಡೆದಿದ್ದಾರೆ. ಬೋಗಸ್ ಹಕ್ಕುಪತ್ರ ವಿತರಣೆ ಪ್ರಕರಣದಲ್ಲಿ ಜನತೆಯ ಮುಂದೆ ದಿನಕ್ಕೊಂದು ರೀತಿಯಲ್ಲಿ ಬೆತ್ತಲಾಗುತ್ತೀರುವುದು ವಿಪರ್ಯಾಸವೇ ಸರಿ!

ಹಕ್ಕುಪತ್ರ ವಿತರಣೆಗೆ ಲಂಚ ಪಡೆದ ಆರೋಪದ ಮೇಲೆ ತಹಸೀಲ್ದಾರ್ ಅಂಬುಜ, ಗ್ರಾಮಲೆಕ್ಕಿಗ ಸಿದ್ದಪ್ಪ ಜೈಲೂಟ ಮಾಡಿಬಂದಿದ್ದು ಆಯ್ತು. ಗ್ರಾಮ‌ ಲೆಕ್ಕಿಗರಾದ ಸತೀಶ್, ಶಿವಕುಮಾರ್, ಸಂದೀಪ್ ಅಮಾನತುಗೊಂಡು ಆಗಿದೆ. ಆದರೇ, ಈಗ ತಾಲೂಕು ಕಛೇರಿಯಲ್ಲಿ ವಿತರಿಸಿರುವ ಹಕ್ಕುಪತ್ರ ಅಸಲಿಯೋ, ನಕಲಿಯೋ ಎಂಬ ಸುದ್ದಿ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಸುದ್ದಿಯ ಸದ್ದಿನ ಹಿಂದೆ ಶೃಂಗೇರಿಯಲ್ಲಿ ದೊಡ್ದ ವ್ಯಕ್ತಿಗಳು, ರಾಜಕಾರಣಿಗಳ ಕೈವಾಡ ಕೂಡ ಬಯಲಾಗುತ್ತ ಹೋಗುತ್ತಿದೆ.

ಇತ್ತೀಚೆಗೆ ಶೃಂಗೇರಿಯಲ್ಲಿ 94ಸಿ, 94ಸಿಸಿ ಅಡಿಯಲ್ಲಿ ಎಷ್ಟು ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗಿದೆ ಎಂದು ಪ್ರವೀಣ್ ಎಂಬುವವರು ಮಾಹಿತಿ ಹಕ್ಕಿನಲ್ಲಿ ತಹಸೀಲ್ದಾರ್ ಕಛೇರಿಗೆ ಮಾಹಿತಿಯನ್ನು ಕೇಳಿದ್ದರು. ತಹಸೀಲ್ದಾರ್ ಕಛೇರಿಯಿಂದ ಒಂದೇ ಒಂದು ಹಕ್ಕುಪತ್ರ ವಿತರಣೆ ಮಾಡಲಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಇದು ತಾಲೂಕು ಆಫೀಸ್ ನಲ್ಲಿ ಶುದ್ಧ ರಾಜಕಾರಣಿ ಎಂದು ಮುಖವಾಡ ತೊಟ್ಟು ಬ್ರೋಕರ್ ಕೆಲಸ ಮಾಡುತ್ತಿದ್ದ ಕೆಲವರಿಗೆ ನುಂಗಲಾರದ ತುತ್ತಾಗಿ ಪರಿಣಾಮಿಸಿದೆ.

ಶೃಂಗೇರಿ ತಹಸೀಲ್ದಾರ್ ಸಹಿ ಹಾಗೂ ಸೀಲ್ ಇರುವ 671 ಬೋಗಸ್ ಹಕ್ಕುಪತ್ರವನ್ನು ವಿತರಣೆ ಮಾಡಲಾಗಿದೆ. ತಾಲೂಕು ಕಛೇರಿಯಲ್ಲಿ ತಹಸೀಲ್ದಾರ್ ಅಂಬುಜ ವಿತರಣೆ ಮಾಡಿದ್ದಾರೆ. (ಪೋಟೋ ಲಗತ್ತಿಸಲಾಗಿದೆ) ತಾಲೂಕು ಕಛೇರಿಯಲ್ಲಿ ಸರ್ಕಾರದ ನಿಯಮದಂತೆ ಹಕ್ಕುಪತ್ರ ವಿತರಣೆ ಮಾಡಲಾಗಿಲ್ಲ. ಶೃಂಗೇರಿ ಪಟ್ಟಣದ ಜೆರಾಕ್ಸ್ ಅಂಗಡಿಯೊಂದರಲ್ಲಿ ಹಕ್ಕುಪತ್ರವನ್ನು ಮುದ್ರಿಸಿ ನೀಡಲಾಗುತ್ತಿತ್ತು. ಈ ಹಕ್ಕುಪತ್ರ ಎಂಬ ಹೆಸರಿನ ಪೇಪರ್'ಗೆ ಯಾವುದೇ ಬೆಲೆಯೂ ಇಲ್ಲ.

ಮೇಡಂ ಸತ್ಯವಂತರು... ಕಾನೂನು ಪ್ರಕಾರ ನಮಗೆ ಹಕ್ಕುಪತ್ರ ನೀಡಿದ್ದಾರೆ ಎಂದು ಹೇಳುವ ಶೃಂಗೇರಿ ಪ್ರಜ್ಞಾವಂತರು ಈಗೆಲ್ಲಿ ಇದ್ದಾರೆ..? ಅಮಾಯಕ ಜನರಿಗೆ ಹಕ್ಕುಪತ್ರದ ಆಸೆಯನ್ನು ತೊರಿಸಿ ಲಕ್ಷಗಟ್ಟಲೆ ಹಣಕ್ಕಿತ್ತವರು ಏನು ಮಾಡುತ್ತಿದ್ದಾರೆ..? ಎಂಬ ಪ್ರಶ್ನೆ ಸಾರ್ವಜನಿಕರ ವಲಯದಲ್ಲಿ ಎದ್ದಿದೆ.

ತಾಲೂಕು ಕಛೇರಿಯಲ್ಲಿ ಹಕ್ಕುಪತ್ರ ವಿತರಣೆ ಮಾಡುತ್ತಿದ್ದ ವೇಳೆಯಲ್ಲಿ ಕೇಸ್ ವರ್ಕರ್ ಪ್ರಕಾಶ್, ತಹಸೀಲ್ದಾರ್ ಅಂಬುಜ ಪಕ್ಕದಲ್ಲಿ ನಿಂತು ಪೋಟೋಕ್ಕೆ ಪೋಸ್ ನೀಡಿತ್ತಿದ್ದ. ಹಾಗೂ ಕೆಲವು ರಾಜಕಾರಣಿಗಳು ಕೂಡ ಪೋಟೋದಲ್ಲಿ ಇದ್ದಾರೆ. ತಾಲೂಕು ಕಛೇರಿಯಿಂದ ಒಂದೇ ಒಂದು ಹಕ್ಕುಪತ್ರ ವಿತರಣೆ ಮಾಡಿಲ್ಲ‌ ಎಂದಾದರೇ ಮೇಲಿನ ಪೋಟೋದಲ್ಲಿ ನೀಡಿದ್ದು ಏನು..? 

ಈ ಪೋಟೋದ ಕುರಿತು‌ ತನಿಖೆಯ ಅವಶ್ಯಕತೆಯಿದೆ. ಕೊಟ್ಟವರ, ಕೊಡಿಸಿದವರು ವಿರುದ್ದ ಜಿಲ್ಲಾಧಿಕಾರಿ ಪ್ರಕರಣ ದಾಖಲಿಸಿ ತನಿಖೆ ಮಾಡಬೇಕು. ತೆಗೆದುಕೊಂಡವರನ್ನು ವಿಚಾರಣೆ ನಡೆಸಿ ಸತ್ಯಾಂಶವನ್ನು ತಿಳಿದು. ಬೋಗಸ್ ಹಕ್ಕುಪತ್ರ ನೀಡಿದವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಶೃಂಗೇರಿ ಜನತೆ ಒತ್ತಾಯಿಸುತ್ತಿದ್ದಾರೆ.

ಜಾಹೀರಾತು/Advertisment

Post a Comment

1 Comments

  1. Top 10 Baccarat - Worrione
    Best Online Casino Our goal is to help you to understand the importance 바카라 사이트 of the Baccarat game by understanding where 온카지노 the casino places your bets. In septcasino our

    ReplyDelete