Facebook

header logo

ವಿನಯ್ ಗುರೂಜಿ ವಿರುದ್ಧ ಅಪಪ್ರಚಾರ : ಗುರು ಭಕ್ತರಿಂದ ಆರೋಪ : ಕೊಪ್ಪದಲ್ಲಿ ಪ್ರತಿಭಟನೆ


ಜಾಹೀರಾತು/Advertisment

ಕೊಪ್ಪ: ಹರಿಹರಪುರ ಸಮೀಪದ ಗೌರಿಗದ್ದೆ ಅವಧೂತ ವಿನಯ್ ಗುರೂಜಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿ ಗುರೂಜಿಯ ಭಕ್ತರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪುರಭವನದಿಂದ ಬಸ್ ನಿಲ್ದಾಣದ ವರೆಗೆ ಮೆರೆವಣಿಗೆ ನಡೆಸಿ ಅಪಪ್ರಚಾರ ನಡೆಸುತ್ತೀರುವವರ ವಿರುದ್ದ ಆಕ್ರೋಶವನ್ನು ಹೊರ ಹಾಕಿದರು.

ಗುರೂಜಿಯವರು ಸಜ್ಜನ ವ್ಯಕ್ತಿಯಾಗಿದ್ದು ಸಮಾಜಕ್ಕೆ ಕೆಡಕನ್ನುಂಟು ಮಾಡುವಂತಹ ಕಾರ್ಯದಲ್ಲಿ ಬಾಗಿಯಾಗುವುದಿಲ್ಲ. ಅವರ ಜನಪ್ರಿಯತೆಯನ್ನು ಸಹಿಸದ ಕೆಲವರು ಅವಹೇಳನಕಾರಿ ಸಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಹಾಕಿ ಸಾಮಾಜಿಕ ಜಾಲತಾಣದಲ್ಲಿ ಅವರ ಘನತೆಗೆ ಕುತ್ತು ಬರುವ ರೀತಿಯಲ್ಲಿ ಪ್ರಸಾರ ಮಾಡುತಿದ್ದಾರೆ. ಅಪಪ್ರಚಾರ ನಡೆಸುವವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕೆಂದು ತಹಸೀಲ್ದಾರ್ ವಿಮಲ ಸುಪ್ರೀಯಾ ರವರಿಗೆ ಮನವಿ ಸಲ್ಲಿಸಿದರು.

Post a Comment

0 Comments