Facebook

header logo

ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ | ಮೈತ್ರಿ ಕಾರ್ಯಕ್ರಮದಿಂದ ಜೆಡಿಎಸ್ ಕಾರ್ಯಕರ್ತರು ದೂರ.!?


ಜಾಹೀರಾತು/Advertisment

ಜಾಹೀರಾತು/Advertisment
ಚಿಕ್ಕಮಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿ ಚುನಾವಣೆಯ ಕಣಕ್ಕೆ ಇಳಿದಿದ್ದು. ಈ ಮೈತ್ರಿ ನಾಯಕರಿಗಷ್ಟೆ ಸೀಮಿತವಾಗಿದೆ ಎಂದು ಹೇಳಲಾಗುತ್ತಿದೆ.

ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ನೆಪ‌ ಮಾತ್ರಕ್ಕೆ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಬೂತ್ ಮಟ್ಟದ ಕಾರ್ಯಕರ್ತರು ಸಭೆ ಸಮಾರಂಭಗಳಲ್ಲಿ ಕಾಣಿಸುತ್ತಿಲ್ಲ. ಮಂಗಳವಾರ ಕೊಪ್ಪದ ಜೆಡಿಎಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮೂರಂಕಿಯ ಕಾರ್ಯಕರ್ತರು ಸಹ ಇರಲಿಲ್ಲ.! ಇದು ಪಕ್ಷದ ವರಿಷ್ಠರು ಮಾಡಿಕೊಂಡ ಮೈತ್ರಿಗೆ ಜೆಡಿಎಸ್ ಕಾರ್ಯಕರ್ತರ ಒಮ್ಮತವಿಲ್ಲ ಎಂದು ಈ ಸಭೆ ಸಾಬೀತು ಪಡಿಸಿದೆ.

ಈ ಹಿಂದೆ ಮಾಜಿ ಶಾಸಕ ಎಂ.ಪಿ ಕುಮಾರಸ್ವಾಮಿ ರವರು, ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಗೆ ಬೆಂಬಲವಾಗಿ ನಿಂತಿದ್ದಾರೆ. ಜಾತ್ಯತೀತ ಮನಸ್ಥಿತಿಯ ಜೆ.ಡಿ.ಎಸ್ ನ ಕಾರ್ಯಕರ್ತರು ಕಾಂಗ್ರೆಸ್‌ಗೆ ಮತ ನೀಡುತ್ತಾರೆ ಎಂದು ಹೇಳಿಕೆ ನೀಡಿದ್ದರು. ಮಾಜಿ ಶಾಸಕರ ಹೇಳಿಕೆಗೂ ಕ್ಷೇತ್ರದ ಜೆಡಿಎಸ್ ನ ವರ್ತನೆ‌ ಗಮನಿಸಿದಾಗ‌ ತಾಳೆಯಾಗುತ್ತಿದೆ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ಮೂಡಿದೆ.

ಕ್ಷೇತ್ರದ ಉದ್ದಗಲದಲ್ಲಿ ನಡೆದ ಮೈತ್ರಿ ಅಭ್ಯರ್ಥಿಯ ಚುನಾವಣಾ ಪ್ರಚಾರದಲ್ಲಿ ಹೆಚ್ಚಾಗಿ ಬಿಜೆಪಿ ಕಾರ್ಯಕರ್ತರು ತೊಡಗಿಸಿಕೊಂಡಿದ್ದರು. ಆದರೇ, ಜೆಡಿಎಸ್ ಮುಖಂಡರಷ್ಟೇ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಜೆಡಿಎಸ್ ಕಾರ್ಯಕರ್ತರ ಸಕ್ರಿಯವಾಗಿ ಭಾಗವಹಿಸದೇ ಇರುವುದು ಮೈತ್ರಿಗೆ ತಲೆನೋವಾಗಿ ಪರಿಣಾಮಿಸಿದೆ.

ಜಾಹೀರಾತು/Advertisment

Post a Comment

0 Comments