Facebook

header logo

ಬೆಕ್ಕಿನ ಮರಿ ನುಂಗಿದ ನಾಗರಹಾವು: ಸ್ನೇಕ್ ಆರೀಫ್ ರಿಂದ ರಕ್ಷಣೆ


ಜಾಹೀರಾತು/Advertisment

ಜಾಹೀರಾತು/Advertisment

ಮೂಡಿಗೆರೆ: ನಾಗರಹಾವೊಂದು ಬೆಕ್ಕಿನ ಮರಿಯನ್ನು ನುಂಗಿ ಮನೆಯಿಂದ ಹೊರಬರಲಾಗದೇ ಸಿಕ್ಕಿಹಾಕಿಕೊಂಡ ಘಟನೆ ತಾಲೂಕಿನ ತರುವೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ದೀಕ್ಷಿತ್ ಎಂಬುವವರ ಮನೆಯೊಳಗೆ ನಾಗರಹಾವು ಬಂದಿತ್ತು. ಹಬ್ಬದ ಕೆಲಸದ ಮಧ್ಯೆ ಮನೆಯವರು ಗಮನಿಸಿಲ್ಲ. ಮಂಚದ ಕೆಳಗೆ ಅಡಗಿಕೊಂಡಿದ್ದ ನಾಗರಹಾವು ಮನೆಯಲ್ಲಿದ್ದ ಬೆಕ್ಕಿನ ಮರಿಯನ್ನು ನುಂಗಿದೆ. ಬಳಿಕ ಮನೆಯಿಂದ ಹೊರಗೆ ಹೋಗುವ ಪ್ರಯತ್ನದಲ್ಲಿ ಸೋತು ಮನೆಯರಿಗೆ ಕಾಣಿಸಿದೆ. ಹಾವು ನೋಡಿ ಭಯಭೀತರಾದ ಕುಟುಂಬಸ್ಥರು ಕೂಗಾಡಿದ್ದಾರೆ. ಇದರಿಂದ ಕಂಗಾಲಾದ ನಾಗರಹಾವು ಪುನಃ ಮನೆಯ ಒಳಗೇ ಹೋಗಿದೆ. ಬೆಕ್ಕಿನ ಮರಿ ನುಂಗಿದ್ದ ಕಾರಣ ತಪ್ಪಿಸಿಕೊಳ್ಳಲಾಗಲಿಲ್ಲ. ಸಮಯ ಪ್ರಜ್ಞೆ ಮೆರೆದು ಮನೆಯ ಬಾಗಿಲನ್ನು ಹೊರಗಿನಿಂದ ಮುಚ್ಚಿದ್ದಾರೆ.

ಉರಗತಜ್ಞ ಸ್ನೇಕ್ ಆರೀಫ್ ಸ್ಥಳಕ್ಕೆ ಭೇಟಿ ನೀಡಿ, ಪರದಾಡುತ್ತಿದ್ದ ನಾಗರಹಾವಿನ ಹೊಟ್ಟೆಯಿಂದ ಬೆಕ್ಕಿನ ಮರಿಯನ್ನು ಕಕ್ಕಿಸಿದ್ದಾರೆ. ತಕ್ಷಣವೇ ಚೈತನ್ಯ ಬಂದು ಹಾವು ಮನೆಯ ಬಳಿಯಿದ್ದ ಸೌದೆ ರಾಶಿ ಅಡಿ ಹೋಗಿ ತಪ್ಪಿಸಿಕೊಳ್ಳಲು ಯತ್ನಿಸಿದೆ. ಕೊನೆಗೆ ಸ್ನೇಕ್ ಅರಿಫ್ ಅದನ್ನು ರಕ್ಷಿಸಿ ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಕೊನೆಗೂ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಜಾಹೀರಾತು/Advertisment

Post a Comment

0 Comments