ಚಿಕ್ಕಮಗಳೂರು : ಹಿಂಗಾರು ಮಳೆಗೆ ಜಿಲ್ಲೆಯ ಮಲೆನಾಡು ಭಾಗ ಕಂಗಾಲಾಗಿದೆ. ಭಾರೀ ಮಳೆಗೆ ಗ್ರಾಮೀಣ ಭಾಗದ ಸೇತುವೆಗಳು ಜಲಾವೃತಗೊಂಡಿದೆ. ಮುತ್ತೋಡಿ ವ್ಯಾಪ್ತಿಯ ಗ್ರಾಮದ ಜನ ಹಳ್ಳ ದಾಟಲು ಪರದಾಡಿದ ಘಟನೆ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಮಲಗಾರು ಗ್ರಾಮದಲ್ಲಿ ವೃದ್ಧೆಯನ್ನ ಅಂಗೈಲಿ ಹೊತ್ತು ಸ್ಥಳೀಯರು ಸಾಗಿದ ಘಟನೆ ನಡೆದಿದೆ. ನಿನ್ನೆ ಸಂಜೆ ಸುರಿದ ಭಾರೀ ಮಳೆಯಿಂದ ನೀರಿನ ಹರಿವಿಕೆಯಲ್ಲಿ ಏರಿಕೆ ಕಂಡಿದೆ.
ಮುತ್ತೋಡಿ ಅರಣ್ಯ ವ್ಯಾಪ್ತಿಯ ಬರುವ ಮಲಗಾರು ಕುಗ್ರಾಮಕ್ಕೆ ಯಾವುದೇ ಸೌಕರ್ಯಗಳು ಇಲ್ಲ. ಇಎಉವ ಕಿರು ಸೇತುವೆ ಮಳೆಯಿಂದ ತುಂಬಿದ ಪರಿಣಾಮ ತುಂಬಿದ ಗ್ರಾಮದ ಜನರ ಪರದಾಟ ನಡೆಸುವಂತಾಗಿದೆ.
0 Comments