ಕೊಪ್ಪ: ತಾಲೂಕಿನ ಬಸರೀಕಟ್ಟೆ - ಕೊಗ್ರೆ ಮುಖ್ಯರಸ್ತೆ ಪಿಡಬ್ಲ್ಯೂಡಿ ಇಲಾಖೆಯ ಅವೈಜ್ಞಾನಿಕ ಕಾರ್ಯ ನಿರ್ವಹಣೆಯಿಂದಾಗಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ರಸ್ತೆ ಯೋಗ್ಯವಲ್ಲ ಎಂಬಂತೆ ಕೆಟ್ಟ ಪರಿಸ್ಥಿತಿಗೆ ತಲುಪಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬಸರೀಕಟ್ಟೆಯ ಕಳಸ ವೃತ್ತ ಬಳಿ ರಸ್ತೆ ತಡೆ ಮಾಡಿ ನಡೆದ ಪ್ರತಿಭಟನೆ ನಡೆಸಿ ಬಿಜೆಪಿ ಕಾರ್ಯಕರ್ತರು ಶಾಸಕ ಟಿ.ಡಿ ರಾಜೇಗೌಡರ ವಿರುದ್ಧ ಆಕ್ರೋಶ ಹೊರಹಾಕಿದರು.
ಬಿಜೆಪಿ ಮುಖಂಡ ಮಣಿಕಂಠನ್ ಕಂದಸ್ವಾಮಿ ಮಾತನಾಡಿ, ದಿನನಿತ್ಯದ ಬಸ್ ಸಂಚಾರವನ್ನು ನಿಲ್ಲಿಸಲಾಗಿದ್ದು ಕಲ್ಲುಗುಡ್ಡೆ, ಮೆಣಸಿನಹಾಡ್ಯ , ಬಿಳಾಲುಕೊಪ್ಪ ಹಾಗೂ ಕೊಗ್ರೆ ಭಾಗದ ಸಾವಿರಾರು ಸಾರ್ವಜನಿಕರಿಗೆ , ಶಾಲ ಮಕ್ಕಳಿಗೆ , ರೋಗ ಪೀಡಿತರಿಗೆ ಸಮಸ್ಯೆಯಾಗಿದ್ದು, ಮಳೆಯಲ್ಲಿ ಕೆಸರಿನ ಕಾಮಗಾರಿ ಮಾಡಿ ರಸ್ತೆಯನ್ನು ಸಂಪೂರ್ಣ ಹದಗೆಡಿಸಿದ್ದಾರೆ ಆದಷ್ಟೂ ಬೇಗಾ ರಸ್ತೆಯನ್ನು ದುರಸ್ತಿ ಮಾಡಿ ಕೊಡುವಂತೆ ಆಗ್ರಹಿಸಿದರು.
ಮುಖಂಡರಾದ ಧರ್ಮರಾಜ್, ಅರುಣ್ ಕುಮಾರ, ನಟರಾಜ್, ಮುರಳಿ, ಪ್ರಕಾಶ್, ಚಂದ್ರಶೇಖರ್, ಸಮರ್ಥ, ಸುಜಯ್, ಮೋಹನ್ ಹಾಗೂ ಇತರರು ಇದ್ದರು.
0 Comments