ಎನ್.ಆರ್ ಪುರ: ಮನುಷ್ಯ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಶನಿವಾರ ಸೀತೂರಿನಲ್ಲಿ ಕಾಡಾನೆ ಕೃಷಿಕರೊಬ್ಬರನ್ನು ಬಲಿ ಪಡೆದುಕೊಂಡಿದೆ.
ಸೀತೂರು ಗ್ರಾಮದ ಕೃಷಿಕರಾದ ಉಮೇಶ್ (56) ಇವರು ತೋಟದಲ್ಲಿ ಮದ್ಯಾಹ್ನಾ 3.30ರ ವೇಳೆಯಲ್ಲಿ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ದಾಳಿ ನಡೆಸಿದ ಪರಿಣಾಮ ಉಮೇಶ್ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ.
ಕಳೆದ ಒಂದು ವಾರದಿಂದ ಮೂರು ಆನೆಗಳ ಗುಂಪು ಕೊಪ್ಪ, ಕುದುರೆಗುಂಡಿ, ಕೆಸವೆ, ಬಿಂತ್ರವಳ್ಳಿ, ತನೂಡಿ, ಭಾಗದಲ್ಲಿ ಸಂಚಾರಿಸಿತ್ತು. ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ಅಸಡ್ಡೆ ತೋರಿದ ಪರಿಣಾಮ ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
0 Comments