ಎನ್.ಆರ್ ಪುರ: ಇಲ್ಲಿನ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿದೆ.
ನ.01 ಎನ್.ಆರ್ ಪುರದ ತಾಲೂಕು ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಹಮ್ಮಿಕೊಳ್ಳಲಾಗಿತ್ತು. ಈ ರಾಷ್ಟ್ರ ಧ್ವಜಾರೋಹಣಕ್ಕೆ ಧ್ವಜದ ಕಟ್ಟೆ ನಿರ್ಮಿಸಲಾಗಿದೆ. ಆದರೇ, ಈ ಧ್ವಜದ ಕಟ್ಟೆಗೆ ಕಪ್ಪು ಬಟ್ಟೆಯಿಂದ ಸುತ್ತಲಾಗಿತ್ತು. ಕಟ್ಟೆಗೆ ಕಪ್ಪು ಬಟ್ಟೆಯನ್ನು ಸುತ್ತಿರುವುದು ವಿವಾದದ ಕೇಂದ್ರ ಬಿಂದುವಾಗಿದೆ. ಧ್ವಜದ ಕಟ್ಟೆ ಹಾಳಾಗಿದ್ದರೇ ಬೇರೆ ಬಣ್ಣದ ಬಟ್ಟೆ ಹಾಗೂ ಅಲಂಕಾರವನ್ನು ಮಾಡಬಾಹುದಿತ್ತು. ಕಪ್ಪು ಬಟ್ಟೆಯನ್ನು ಮುಚ್ಚುವ ಅವಶ್ಯಕತೆ ಏನಿತ್ತು ಎಂದು ಕನ್ನಡ ಪರ ಸಂಘಟನೆಗಳನ್ನು ತಹಸೀಲ್ದಾರ್ ಅವರನ್ನು ಪ್ರಶ್ನಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆದ ಪ್ರೇಮಾ ಶ್ರೀನಿವಾಸ್ ಮಾತನಾಡಿ, ಧ್ವಜದ ಕಟ್ಟೆಗೆ ಕಪ್ಪು ಬಣ್ಣದ ಬಟ್ಟೆಯನ್ನು ತಹಸೀಲ್ದಾರ್ ಅಪಮಾನ ಮಾಡಿದ್ದಾರೆ. ಅಲ್ಲೇ ಬದಲಾಯಿಸಿ ಎಂದರು ತಹಸೀಲ್ದಾರ್ ಅಸಡ್ಡೆ ತೋರಿದ್ದಾರೆ. ತಹಸೀಲ್ದಾರ್ ವಿರುದ್ದ ಜಿಲ್ಲಾಡಳಿತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
0 Comments