ಚಿಕ್ಕಮಗಳೂರು: ಡಿ.14 ರಂದು ಚಿಕ್ಕಮಗಳೂರಿನ ಗುರು ದತ್ತಾತ್ರೇಯ ಪೀಠದಲ್ಲಿ ವಿಹಿಂಪ ಮತ್ತು ಬಜರಂಗದಳ ಹಮ್ಮಿಕೊಂಡಿರುವ ದತ್ತ ಜಯಂತಿ ಹಿನ್ನೆಲೆಯಲ್ಲಿ ಕೆಲ ನಿರ್ದಿಷ್ಟ ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟು ತೆರೆಯದಂತೆ ಜಿಲ್ಲಾಡಳಿತ ಆದೇಶಿಸಿದೆ.
ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ, ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದ್ದಾರೆ.
https://youtu.be/nhNJeXXwORA
ದತ್ತಮಾಲಾಧಾರಿಗಳು ದತ್ತಪೀಠಕ್ಕೆ ಆಗಮಿಸಿ ನಿರ್ಗಮಿಸುವ ಮಾರ್ಗದಲ್ಲಿ ಬರುವ ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆ, ಆಲ್ದೂರು, ಹಾಂದಿ , ವಸ್ತಾರೆಯ ಎಲ್ಲಾ ರೀತಿಯ ಅಂಗಡಿ, ಮುಂಗಟ್ಟು, ಹೋಟೆಲ್‌ಗಳನ್ನು ಡಿ.14 ರಂದು ಬೆಳಿಗ್ಗೆ 4 ಗಂಟೆಯಿಂದ ರಾತ್ರಿ 12 ಗಂಟೆಗೆ ವರೆಗೆ ಮುಚ್ಚಲು ಸೂಚಿಸಿದ್ದಾರೆ.
ಮೂಗ್ತಿಹಳ್ಳಿಯಿಂದ ಚಿಕ್ಕಮಗಳೂರು ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದವರೆಗೆ (ಕೆ.ಎಂ.ರಸ್ತೆ), ಐ.ಜಿ ರಸ್ತೆ ಮತ್ತು ಆರ್.ಜಿ ರಸ್ತೆ, (ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ರಾಮನಹಳ್ಳಿ, ವರೆಗೆ) (ಈ ರಸ್ತೆಗಳಲ್ಲಿರುವ ಸಸ್ಯಹಾರಿ ಹೋಟೆಲ್ ಗಳನ್ನು ಹೊರತುಪಡಿಸಿ). ಜಾಲಿಫ್ರೆಂಡ್ ಸರ್ಕಲ್ ನಿಂದ ಅಲ್ಲಂಪುರ, ಆಲೇನಹಳ್ಳಿ, ಸಿರಿ ಕಾಫಿ ಶಾಪ್/ಹೋಂ ಸ್ಟೇ, ಕೈಮರ, ಅತ್ತಿಗುಂಡಿ ಮತ್ತು ಮಲ್ಲೇನಹಳ್ಳಿ ಗ್ರಾಮ, ಕೆ.ಎಂ. ರಸ್ತೆ, (ಶೃಂಗಾರ್ ಸರ್ಕಲ್ ನಿಂದ ಎ.ಐ.ಟಿ ಸರ್ಕಲ್ ವರೆಗೆ), ಬಸವನಹಳ್ಳಿ ಮುಖ್ಯರಸ್ತೆ (ಕೆ.ಇ.ಬಿ ಈದ್ಗಾ ಬಳಿಯಿಂದ ಹನುಮಂತಪ್ಪ ವೃತ್ತದ ವರೆಗೆ), ಆಲ್ದೂರು ಪಟ್ಟಣ ಹಾಗೂ ಹಾಂದಿಯಿಂದ ಭೂತನಕಾಡು ಮತ್ತು ಹಾಂದಿಯಿಂದ ವಸ್ತಾರೆವರೆಗೆ ಅಂಗಡಿ ಮುಂಗಟ್ಟುಗಳನ್ನು ತೆರೆಯದಂತೆ ನಿರ್ಬಂಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
0 Comments