ಕೊಪ್ಪ: ಪಟ್ಟಣದ ಹೊರ ವಲಯದಲ್ಲಿರುವ ಅಮ್ಮಡಿ ಎಸ್ಟೇಟ್ ನಲ್ಲಿ ತೆರದ ಬಾವಿಗೆ ಬಿದ್ದು ಎರಡು ಮಕ್ಕಳು ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.
ಅಮ್ಮಡಿ ಎಸ್ಟೇಟ್ ಮೂರನೇ ಗೇಟ್ ನ ಲೈನ್ ಮನೆಯಲ್ಲಿ ವಾಸವಿದ್ದ ಮಧ್ಯಪ್ರದೇಶ ಮೂಲದ ಸುನೀತಾ ರವರ ಆರು ವರ್ಷದ ಸೀಮಾ ಹಾಗೂ 2 ವರ್ಷದ ರಾಧಿಕಾ ಎಂಬ ಎರಡು ಹೆಣ್ಣು ಮಕ್ಕಳು ಎಸ್ಟೇಟ್ ನಲ್ಲಿ ಆಟವಾಡಲು ತೆರಳಿದ್ದ ವೇಳೆಯಲ್ಲಿ ಈ ದುರ್ಘಟನೆ ನಡೆದಿದೆ.
ಮಕ್ಕಳನ್ನ ಮನೆಯಲ್ಲಿ ಬಿಟ್ಟು ತಾಯಿ ಕೆಲಸಕ್ಕೆ ತೆರಳಿದ್ದರು, ಕೆಲಸ ಮುಗಿಸಿ ಸಂಜೆ ನಾಲ್ಕು ಗಂಟೆ ಹಿಂದಿರುಗಿದಾಗ ಮಕ್ಕಳ ಕಾಣಿಸಲಿಲ್ಲ. ಆಗ ಎಸ್ಟೇಟ್ ನಲ್ಲಿ ಕಾರ್ಮಿಕರು ಹುಡುಕಲು ಆರಂಭಿಸಿದ್ದಾರೆ, ರಾತ್ರಿ ಎಂಟು ಗಂಟೆಯ ಸಮಯಕ್ಕೆ ಮಕ್ಕಳು ಬಾವಿಗೆ ಬಿದ್ದು ಮೃತರಾಗಿರುವುದು ತಿಳಿದಿದೆ. ಸ್ಥಳಕ್ಕೆ ಆಗ್ನಿ ಶಾಮಕ ದಳದ ಸಿಬ್ಬಂದಿಗಳು ಬಾವಿಯಿಂದ ಮಕ್ಕಳನ್ನು ಮೇಲಕ್ಕೆ ಎತ್ತಿದ್ದಾರೆ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 Comments