Facebook

header logo

ಅಡಿಕೆ ಕದ್ದ ದಂಪತಿ ಅಂದರ್ ! ಎನ್.ಆರ್ ಪುರ ಪೊಲೀಸರ ಮಿಂಚಿನ ಕಾರ್ಯಚರಣೆ


ಜಾಹೀರಾತು/Advertisment
ಎನ್.ಆರ್.ಪುರ: ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮದಲ್ಲಿ ಸುಮಾರು 65 ರಿಂದ 70 ಅಡಿಕೆ ಮರಗಳಲ್ಲಿನ ಕೊನೆಗಳನ್ನು ಕೊಯ್ದು, ಅಲ್ಲಿಯೇ ಉದುರು ಮಾಡಿಕೊಂಡು ಹೋಗಿರುವುದು ಕಂಡು ಬಂದಿದ್ದು, ಈ ಬಗ್ಗೆ ಕೆಲ ರೈತರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನನ್ವಯ ಪೊಲೀಸರು ಎಸ್ಪಿ ವಿಕ್ರಮಅಮಟೆ ಹಾಗೂ ಕೊಪ್ಪ ಡಿ.ಎಸ್ಪಿ ಬಾಲಾಜಿಸಿಂಗ್, ಸಿಪಿಐ ಗುರುದತ್‌ಕಾಮತ್ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಬಿ.ಎಸ್.ನಿರಂಜನ್‌ಗೌಡ, ಜ್ಯೋತಿ ಹಾಗೂ ಸಿಬ್ಬಂಧಿಗಳಾದ ಪರಮೇಶ್, ಪಿ.ಎ.ಬಿನು, ಮಧು, ಅಮಿತ್ ಚೌಗಲೆ, ದೇವರಾಜ್, ಕೌಶಿಕ್, ನವೀನ್‌ಕುಮಾರ್ ತಂಡವು ಮಹಮ್ಮದ್ ಸಾದಿಕ್ ಬಿನ್ ನಸ್ರುಲ್ಲಾ (39) ಸ್ವಂತ ಊರು ಕಡೂರು, ಹಾಲಿ ನಿವಾಸ ಲಕ್ಕಿನಕೊಪ್ಪ, ಹಾಗೂ ಸಲ್ಮಾ ಕೋಂ ಮಹಮ್ಮದ್ ಸಾದಿಕ್ (39) ದಂಪತಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಲವು ಮಾರ್ಗಗಳ ಸಿಸಿ ಕ್ಯಾಮೆರಾಗಳಲ್ಲಿನ ಚಲವಲನಗಳನ್ನು ಆಧರಿಸಿ, ಲಕ್ಕಿನಕೊಪ್ಪ ಸರ್ಕಲ್ ಬಳಿ ಮಹಮ್ಮದ್‌ ಸಾದಿಕ್‌ನನ್ನು ಬಂಧಿಸಿದ್ದಾರೆ. ವಿಚಾರಣೆಗೊಳಪಡಿಸಿದಾಗ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಡಿಕೆ ಕಳ್ಳತನ ಮಾಡಿರುವುದು ತಿಳಿದು ಬಂದಿದೆ. ನಂತರ ಕಳ್ಳತನದಲ್ಲಿ ಭಾಗಿಯಾಗಿದ್ದ ಮಹಮ್ಮದ್ ಸಾದಿಕ್‌ನ ಪತ್ನಿ ಸಲ್ಮಾಳನ್ನು ಮನೆಯಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ 202.87 ಕೆ.ಜಿ. ಒಣ ಅಡಿಕೆ, ಮಾರುತಿ ಜೆನ್ ಕಾರನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಯಶಸ್ವಿಯಾಗಿ ಆರೋಪಿತರನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿದ ಎಲ್ಲರಿಗೂ ಎಸ್ಪಿ ವಿಕ್ರಮಅಮಟೆ ಶ್ಲಾಘಿಸಿದ್ದಾರೆ.

Post a Comment

0 Comments