ಕಳಸ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಿತ್ಯಾನಂದ ಗೌಡ ಇವರ ಮೇಲೆ ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬಂದಿತ್ತು, ಪತ್ನಿ ಆಮಿತಾ ಕಳಸ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಳಸದ ಪೊಲೀಸ್ ಕ್ವಾಟರ್ಸ್ನಲ್ಲಿ ಜ.17ರಂದು ನನ್ನ ಪತಿಯಾದ ನಿತ್ಯಾನಂದ ಗೌಡ ಇವರು ನನ್ನ ಮೇಲೆ ಹಲ್ಲೆ ನಡೆಸಿದ್ದು, ಕೆನ್ನೆಗೆ ಹೊಡೆದು, ಕಾಲಿನಿಂದ ಒದ್ದು ರೂಮಿನಿಂದ ಹೊರ ಹಾಕಿದ್ದಾನೆ. 50 ಲಕ್ಷ ವರದಕ್ಷಿಣೆ ನೀಡಬೇಕು. ಇಲ್ಲದಿದ್ದರೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಅಮಿತಾ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ನಿತ್ಯಾನಂದ ಗೌಡನ ಮೇಲೆ ಹಲವು ಆರೋಪಗಳು ಇವೆ, ದೂರು ನೀಡಲು ಬಂದ ಹೆಣ್ಣು ಮಕ್ಕಳ ಜತೆಯಲ್ಲಿ ಅಸಭ್ಯ ವರ್ತನೆ ಮಾಡುತ್ತಾನೆ. ಪಾಸ್‌ಪೋರ್ಟ್ಗೆ ಬಂದ ಮಹಿಳೆಯರ ಜತೆಯಲ್ಲಿ ಲೈಂಗಿಕ ಸಂಪರ್ಕ ಹೊಂದಲು ಬಯಸುತ್ತಾನೆ. ಈ ಹಿಂದೆ ಕಾಪು ಪೊಲೀಸ್ ಠಾಣೆಯಲ್ಲಿ ಮುಸ್ಲಿಂ ಮಹಿಳೆಯೊಂದಿಗೆ ಅನೈತಿಕ ಸಂಬAಧ ಹೊಂದಿದ್ದ, ಆಗ ಮುಸ್ಲಿಂಮರು ಗಲಾಟೆ ಮಾಡಿದ್ದರು, ಕೋಟ, ಬ್ರಹ್ಮಾವರ ಠಾಣೆಯಲ್ಲಿ ಮಹಿಳೆಯರಿಗೆ ನ್ಯಾಯ ಕೊಡಿಸುವುದಾಗಿ ಹೇಳಿ ಮಂಗಳೂರಿನಲ್ಲಿ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ದೂರುನಲ್ಲಿ ಗಂಭೀರ ಆರೋಪ ಮಾಡಿದ್ದರು.
ಈ ಸಂಬಂದ ಕಳಸ ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ ನಿತ್ಯಾನಂದ ಗೌಡ ಸೇರಿದಂತೆ ಮೇನಕ, ಚಂದ್ರಕಾAತ್, ಪ್ರೇಮಾ ವಿರುದ್ದ ದೂರು ದಾಖಲಾಗಿದೆ
ಜಾಹೀರಾತು/Advertisment
![]() |
---|
0 Comments