22 ವರ್ಷದ ಯುವಕನಿಗೆ ಕೊರೊನಾ:
22 ವರ್ಷದ ಯುವಕನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಕೇರಳದ ಕೊಚ್ಚಿಯಲ್ಲಿ ಕೆಲಸ ಮಾಡುತ್ತಿದ ಯುವಕ ಇತ್ತೀಚೆಗೆ ರಜೆ ಹಿನ್ನೆಲೆ ತನ್ನ ಹುಟ್ಟೂರಾದ ಚಿಕ್ಕಮಗಳೂರಿಗೆ ಆಗಮಿಸಿದ್ದ. ಇಲ್ಲಿಗೆ ಬಂದ ನಂತರ ಉಸಿರಾಟದ ಸಮಸ್ಯೆ ಯುವಕನಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಯುವಕನನ್ನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಸ್ಯಾಂಪಲ್ ಪರೀಕ್ಷೆ ವೇಳೆ ಕೊರೊನಾ ದೃಢ:
22 ವರ್ಷದ ಯುವಕನಿಗೆ ಚಿಕಿತ್ಸೆ ವೇಳೆ ಆರೋಗ್ಯ ಇಲಾಖೆ ಸ್ಯಾಂಪಲ್ ತೆಗೆದುಕೊಂಡಿದ್ದು, ಹಾಸನ ಲಬ್ಗೆ ಕಳಿಸಿತ್ತು. ಇದೀಗ ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ನಲ್ಲಿ ಕೊರೊನಾ ಇರುವುದು ಕನ್ಫರ್ಮ್ ಆಗಿದೆ.
ಒಟ್ನಲ್ಲಿ ಕಾಫಿನಾಡಿಗೂ ಕೊರೊನಾ ಕರಿ ನೆರಳು ಬಿದಿದ್ದು, ಸಾರ್ವಜನಿಕರು ಎಚ್ಚರವಹಿಸಬೇಕಿದೆ.
0 Comments