ಕೊಪ್ಪ: ಪಟ್ಟಣದ ಹೊರ ವಲಯದ ಹುಚ್ಚುರಾಯರ ಕೆರೆ (ಹಿರಿಕೆರೆ) ಸಮೀಪ ಕೆ.ಎಸ್.ಆರ್.ಟಿ ಹಾಗೂ ಕಾರು ನಡುವೆ ಅಪಘಾತವಾಗಿದ್ದು, ಕಾರು ಚಾಲಕನಿಗೆ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಶೃಂಗೇರಿಯಿಂದ ತರೀಕೆರೆಗೆ ತೆರಳುತಿದ್ದ ಬಸ್ ಹಾಗು ಶೃಂಗೇರಿ ಕಡೆಗೆ ಹೋಗುತ್ತಿದ್ದ ಕಾರಿನ ನಡುವೆ ಅಪಘಾತವಾಗಿದೆ. ಡಿಕ್ಕಿಯಾದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ. ಬಸ್ ವಿದ್ಯುತ್ ಕಂಬಕ್ಕೆ ಹೊಡೆದಿದೆ. ಬಸ್ ಟೈರ್ ಬಳಿ ಹಾನಿಯಾಗಿದೆ.
ಬಸ್ ನಲ್ಲಿ ಪ್ರಯಾಣಿಸುತ್ತಿದ್ದವರು ಸುರಕ್ಷಿತರಾಗಿದ್ದಾರೆ ಎಂದು ತಿಳಿದು ಬಂದಿದೆ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಹೀರಾತು/Advertisment
![]() |
---|
0 Comments