Facebook

header logo

ಮುಳ್ಳಯ್ಯನಗಿರಿ : ಜರಿದ ಗುಡ್ಡ.! ಮಳೆ ಹೆಚ್ಚಾದರೆ ಇನ್ನಷ್ಟು ಕುಸಿಯುವ ಆತಂಕ


ಜಾಹೀರಾತು/Advertisment
ಚಿಕ್ಕಮಗಳೂರು: ನಿರಂತರವಾಗಿ ಸುರಿಯುತ್ತಿದ್ದ ಮಳೆ ಶನಿವಾರ ಕೊಂಚ ಬಿಡುವು ನೀಡಿದೆ. ಆದರೇ ಜಿಲ್ಲೆಯ ಅಲ್ಲಲ್ಲಿ ಗುಡ್ಡು ಜರಿದ ವರದಿಯಾಗುತ್ತಿದೆ.

ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ತಪ್ಪಲಿನ ರಸ್ತೆಯಲ್ಲಿ‌ ಗುಡ್ಡ ಜರಿದ ಘಟನೆ ನಡೆದಿದೆ. ದತ್ತಪೀಠ ಮಾರ್ಗದ ಕವಿಕಲ್ ಗಂಡಿ ಬಳಿ ಗುಡ್ಡದ ಜೊತೆ ರಸ್ತೆಗೆ ಕಲ್ಲು ಜರಿದಿದೆ.

ಕೊಂಚ ಮಟ್ಟಿಗೆ ಗುಡ್ಡ ಜರಿದಿದೆ. ಪ್ರವಾಸಿಗರಿಗೆ, ವಾಹನ ಸವಾರರಿಗೆ ಸಂಚಾರಕ್ಕೆ ಯಾವುದೇ ತೊಂದರೆಯಿಲ್ಲ. ಗಾಳಿ, ಮಳೆ ಹೆಚ್ಚಾದರೇ ಗುಡ್ಡ ಇನ್ನಷ್ಟು ಕುಸಿಯುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

Post a Comment

0 Comments