Facebook

header logo

ರಣ ಮಳೆಗೆ ಮತ್ತೊಂದು ಬಲಿ.! ಬೈಕ್ ಮೇಲೆ ಬಿದ್ದ ಮರ : ಸವಾರ ಸಾವು


ಜಾಹೀರಾತು/Advertisment
ಚಿಕ್ಕಮಗಳೂರು: ನಿರಂತರವಾಗಿ ಸುರಿಯುತ್ತಿರುವ ಗಾಳಿ ಮಳೆಗೆ ಮತ್ತೊಂದು ಸಾವು ಸಂಭವಿಸಿದೆ. ಬಾಳೆಹೊನ್ನೂರು ಸಮೀಪದ ಎಲೆಕಲ್ ಘಾಟಿಯಲ್ಲಿ ಘಟನೆ ನಡೆದಿದೆ.

ಮೃತ ಬೈಕ್ ಸವಾರನನ್ನು ಅನಿಲ್ (55) ಎಂದು ಗುರುತಿಸಲಾಗಿದೆ. ಬಾಳೆಹೊನ್ನೂರಿಗೆ ತೆರಳುತ್ತಿದ್ದ ವೇಳೆಯಲ್ಲಿ ಈ ದುರ್ಘಟನೆ ನಡೆದಿದೆ.

ಬೈಕ್'ನ ಮೇಲೆ‌ ಮರ ಬಿದ್ದ ಕೂಡಲೇ ಆಸ್ಪತ್ರೆ ರವಾನೆ ಮಾಡಲು ಸ್ಥಳೀಯರು ಮುಂದಾಗಿದ್ದರು. ಈ ವೇಳೆ ಆಂಬುಲೆನ್ಸ್ ಸ್ಥಳಕ್ಕೆ ಬರುವುದು ತಡವಾಗಿತ್ತು. ಅಗ್ನಿಶಾಮಕ ವಾಹನದಲ್ಲಿ ರವಾನೆ ಮಾಡಲಾಗಿತ್ತು. ಆಸ್ಪತ್ರೆಗೆ ತೆರಳುವ ಮಾರ್ಗದ‌ ಮಧ್ಯೆ ಅನಿಲ್ ಸಾವನ್ನಪ್ಪಿದ್ದಾರೆ. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು/Advertisment

Post a Comment

0 Comments