ಕಳಸ: ಗ್ರಾಮ ಪಂಚಾಯಿತಿ ಚುನಾವಣಾ ಪ್ರಚಾರಕ್ಕೆ ಹೋದವರು ಗೇಟಿಗೆ ಸಿಕ್ಕಿ ಸಾವು, ಬದುಕಿನ ನಡುವೆ ನರಳಾಡ್ತಾ ಕೂಗುತ್ತಿದ್ದ ಕಾಡುಕುರಿಯನ್ನು ರಕ್ಷಿಸಿದ ಘಟನೆ ಕಳಸ ತಾಲೂಕಿನ ನೆಲ್ಲಿಕೆರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ನೆಲ್ಲಿಕೆರೆ ಗ್ರಾಮದ ಕಿರಣ್ ಮೋನಿಸ್ ಹಾಗೂ ರತ್ನಾಕರ್ ಎಂಬುವರು ಪ್ರಚಾರಕ್ಕೆಂದು ತೆರಳುವಾಗ ಕಾಡುಕುರಿಯೊಂದು ಕೂಗುತ್ತಿರುವ ಶಬ್ಧ ಕೇಳಿಸಿತ್ತು. ಕೂಡಲೇ ಇಬ್ಬರು ಅಭ್ಯರ್ಥಿಗಳು ಪ್ರಚಾರವನ್ನ ಬಿಟ್ಟು ಕಾಡುಕುರಿಯನ್ನ ಹುಡುಕಿಕೊಂಡು ಹೋಗಿ ಅದನ್ನ ಗೇಟಿನಿಂದ ಬಿಡಿಸಿ ರಕ್ಷಿಸಿದ್ದಾರೆ.
ಕುರಿ ದೇಹದ ಅರ್ಧ ಭಾಗ ಗೇಟಿನ ಮಧ್ಯೆ ಸಿಲುಕಿ ಎರಡು ಕಾಲು ಮುಂದೆ ಮತ್ತೆರಡು ಕಾಲು ಹಿಂದೆ ಎಂಬಂತಹಾ ಸ್ಥಿತಿಯಲ್ಲಿ ಕಾಡುಕುರಿ ಗೇಟಿಗೆ ಸಿಕ್ಕಿಬಿದ್ದಿತ್ತು. ಜನ ಕಾಡುಕುರಿಗೆಂದು ಬೇಟೆಗಾಗಿ ಕಾಡಿಗೆ ಹೋಗುತ್ತಾರೆ. ಆದರೆ, ಕೈಗೆ ಸಿಕ್ಕಿದ್ದು, ಪ್ರಾಣಾಪಾಯದಲ್ಲಿ ಕುರಿಯನ್ನ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
3 Comments
👍👍👍
ReplyDelete👍👍👍
ReplyDeleteGreat job. God bless them.
ReplyDelete