ಆಲ್ದೂರು: ಗಾಳಿಗಂಡಿ ಗ್ರಾಮದಲ್ಲಿ ಮತದಾನಕ್ಕೆ ಬಂದಿದ್ದ ಮತದಾರನು ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ಪೇದೆಯೊಬ್ಬ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು. ಸಾರ್ವಜನಿಕರು ಪೋಲಿಸ್ ವಾಹನ ಅಡ್ಡಗಟ್ಟಿ ಆಕ್ರೋಶ ಹೊರಹಾಕಿ, ಆಲ್ದೂರು ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ಲಕ್ಷ್ಮಣ ಎಂಬ ಯುವಕನಿಗೆ ಇನ್ಸ್ಪೆಕ್ಟರ್ ಶಂಭು ಲಿಂಗಯ್ಯರಿಂದ ಲಾಟಿ ಏಟು ನೀಡಿದ್ದಾರೆ. ಇತ್ತ ಲಾಠಿ ಏಟಿನಿಂದ ಯುವಕನ ಮೂಗು, ಕಣ್ಣಿಗೆ ಗಾಯವಾಗಿದೆ.
ಘಟನೆಯಿಂದ ಆಕ್ರೋಶಗೊಂಡ ಸಾರ್ವಜನಿಕರಿಂದ ಠಾಣೆ ಮುತ್ತಿಗೆ ಯತ್ನ ನಡೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟಿದ್ದು. ಪಿಎಸ್ಐ ಶಂಭುಲಿಂಗಯ್ಯ ಅವರನ್ನು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ಪಿಎಸ್ಐ ವಿರುದ್ಧ ಕ್ರಮಕ್ಕೆ ಪಟ್ಟು ಹಿಡಿದಿದ್ದಾರೆ.
2 Comments
ಪೋಲಿಸರಿಗೆ ಏನಾಗಿದೆ ರೋಗ
ReplyDeleteThis comment has been removed by the author.
Delete