Facebook

header logo

ಉಪ್ಪಿನ ಪ್ಯಾಕೆಟ್'ನಲ್ಲಿ ಕಲ್ಲು, ಮರಳು..! ಗ್ರಾಹಕನ ಆಕ್ರೋಶ


ಜಾಹೀರಾತು/Advertisment
ಮೂಡಿಗೆರೆ: ಇತ್ತಿಚೇಗೆ ಸಮಾರಂಭದ ಅಡುಗೆಗಾಗಿ ತಂದಿದ್ದ ಉಪ್ಪಿನ ಪ್ಯಾಕೆಟ್ ಕಲ್ಲು, ಮರಳುಗಳು ತುಂಬಿ‌ ಕೊಂಡಿದ್ದು, ಇದನ್ನು ಕಂಡ ಗ್ರಾಹಕರೊಬ್ಬರು ಉಪ್ಪಿನಲ್ಲಿಯೂ ಕನ್ನ ಹಾಕುವ ಕಂಪನಿಯ ವರ್ತನೆಯನ್ನು ಕಂಡು ಗಾಬರಿಯಾಗಿದ್ದಾರೆ.

ಮೂಡಿಗೆರೆಯ ಅಂಗಡಿಯೊಂದರಿಂದ ಗೌಡಹಳ್ಳೀಯ ರತನ್ ಉಪ್ಪನ್ನು ಖರೀದಿಸಿ ಕೊಂಡು‌ ಬಂದಿದ್ದರು. ಮನೆಗೆ ಬಂದು ಉಪ್ಪಿನ ಪ್ಯಾಕೆಟ್ ಒಪನ್ ಮಾಡಿದ ನೋಡಿದಾಗ ಮರಳು, ಕಲ್ಲುಗಳನ್ನು ಕಾಣಿಸಿದೆ. ಉಪ್ಪಿನ ಕಂಪನಿಯವರು ಈ ರೀತಿ ಮೋಸ ಮಾಡಿರುವುದನ್ನು ಕಂಡ ಮೈನ್ ಡೀಲರ್ ಅವರನ್ನು ಸಂಪರ್ಕಿಸಿ ಮೋಸ ಹೋದ ಬಗ್ಗೆ ಹೇಳಿಕೊಂಡಿದ್ದಾರೆ. ಆದರೇ, ಅವರು ಹಾರಿಕೆಯ ಉತ್ತರವನ್ನು ನೀಡಿದ್ದಾರೆಂದು ರತನ್ ಒತ್ತಾಯಿಸಿದ್ದಾರೆ‌.

ಉಪ್ಪನ್ನು ಮನೆಯಲ್ಲಿ ಉಪ್ಪನ್ನು ಕಣ್ಣು ಮುಚ್ಚಿಕೊಂಡು ಬಳಸುತ್ತೇವೆ. ಉಪ್ಪಿನಲ್ಲಿ ಈ ರೀತಿ ಮರಳು, ಕಲ್ಲು ಇರುವುದನ್ನು ನೋಡುತಿದ್ದರೆ ಮುಂದಿನ ದಿನಗಳಲ್ಲಿ  ಉಪ್ಪನ್ನು ಬಳಸುವ ಮುನ್ನ ಸಂಶಯ ದೃಷ್ಟಿಯಿಂದ ನೋಡುವಂತಾಗಿದೆ. ಸಂಬಂಧ ಪಟ್ಟವರು ಗಮನ ಹರಿಸಿ ಮುಂದೆ ಇಂಥ ಎಡವಟ್ಟು ಆಗದಂತೆ ಎಚ್ಚರವಹಿಸಬೇಕು ಎಂದು ವಹಿಸಿಬೇಕೆಂದು ಸಂತೋಷ್ ಗೌಡ ಆಲ್ದೂರು ಒತ್ತಾಯಿಸಿದ್ದಾರೆ‌

Post a Comment

2 Comments

  1. ಸೂಪರ್ ಸರ್ ಹೀಗೆ ನಿಮ್ಮ ಕಾರ್ಯ ವೈಖರಿ ಮುಂದುವರಿಯಲಿ ಹಾಗೆ ಸದಾ ಕಾಲ ನಮ್ಮ ಸಮಾಜಕ್ಕೆ ನಿಮ್ಮ ನಿಷ್ಕಳಂಕ ಸೇವೆ ಹೀಗೆಯೇ ಸಾಗಲಿ ಶುಭವಾಗಲಿ

    ReplyDelete
  2. ಸೂಪರ್ ಸರ್ ಹೀಗೆ ನಿಮ್ಮ ಕಾರ್ಯ ವೈಖರಿ ಮುಂದುವರಿಯಲಿ ಹಾಗೆ ಸದಾ ಕಾಲ ನಮ್ಮ ಸಮಾಜಕ್ಕೆ ನಿಮ್ಮ ನಿಷ್ಕಳಂಕ ಸೇವೆ ಹೀಗೆಯೇ ಸಾಗಲಿ ಶುಭವಾಗಲಿ

    ReplyDelete