Facebook

header logo

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮೇಲೆ ಕೇಸ್ ದಾಖಲಾಗಿದ್ದರೂ : ಪ್ರತಿಭಟಿಸಲು ಮುಂದಾಗದ ಬಿಜೆಪಿ • ಯಾಕೆ..?


ಜಾಹೀರಾತು/Advertisment
ಕೊಪ್ಪ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮೂರೊಳಿ ಸೇರಿದಂತೆ ಪ.ಪಂ ಸದಸ್ಯ ಶ್ರೀನಿವಾಸ ಶೆಟ್ಟಿ, ಪ್ರಸನ್ನ ಎಂಬುವವರ ಮೇಲೆ ಪ.ಪಂ ನೌಕರ ಸುಬ್ಬಣ್ಣ ಎಂಬುವವರು ದೂರು ನೀಡಿದ್ದರು. ಕೊಪ್ಪ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿತ್ತು. 

ಬಿಜೆಪಿಗರು ಕೇವಲ ಪತ್ರಿಕಾಗೋಷ್ಠಿ ನಡೆಸಿ ಕೈ ತೊಳೆದುಕೊಂಡರು‌ ಹೊರೆತು ಯಾವುದೇ ಪ್ರತಿಭಟನೆಗಳನ್ನು ನಡೆಸಲು ಮುಂದಾಗಲಿಲ್ಲ. ಒಬ್ಬ ಸರ್ಕಾರಿ ನೌಕರನ ಮೇಲೆ ನಡೆದ ಹಲ್ಲೆಯನ್ನು ಸಹ ಖಂಡಿಸುವಲ್ಲಿ ಮುಂದಾಗಲಿಲ್ಲ. ಬಿಜೆಪಿ ಮುಖಂಡರ ಈ ನಡೆ ಕಾರ್ಯಕರ್ತರಲ್ಲಿ ಗೊಂದಲ ಮೂಡಿದೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ ಓರ್ವ ನ್ಯಾಯವಾದಿ, ವಾಗ್ಮಿ ಸಹ ಅಂತವರ ವಿರುದ್ದ ಪ್ರತಿಭಟನೆ ಅಥವಾ ತಮ್ಮ ಸರ್ಕಾರ ಇದ್ದು‌ ಬಂಧನ ಮಾಡಿಸಿದ್ದರೇ ಮುಂದಿನ ದಿನದಲ್ಲಿ ಬಿಜೆಪಿ ಮುಖಂಡರಿಗೆ ಸಮಸ್ಯೆ ಆಗಬಹುದು ಎಂಬ ಕಾರಣಕ್ಕೆ ಕೈ ಕಟ್ಟಿ, ಬಾಯ್ ಮುಚ್ಚಿ ಕುಳಿತಿದ್ದಾರಯೇ ಎಂಬ ಪ್ರಶ್ನೆ ಬಿಜೆಪಿ ಕಾರ್ಯಕರ್ತರು ಚರ್ಚಿಸುತ್ತಿದ್ದಾರೆ.

ಮಾಜಿ‌ ಸಚಿವ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್ ಅವರು ಈ ಪ್ರಕರಣ ಕುರಿತು ಎಲ್ಲೂ ತುಟಿ ಬಿಚ್ಚಿಲ್ಲ. ತಮ್ಮದೇ ಸರ್ಕಾರದ ಒಬ್ಬ ನೌಕರನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕೇಸ್ ದಾಖಲಾಗಿದ್ದರೂ, ಅವರು ಮೌನಕ್ಕೆ ಜಾರಿದ ಉದ್ದೇಶ ಏನು.? ಅಥವಾ ತಮ್ಮದೇ ಸರ್ಕಾರಲ್ಲಿ ಸರ್ಕಾರಿ‌ ನೌಕರನಿಗೆ ರಕ್ಷಣೆ ನೀಡಲು ಸಾಧ್ಯವಾಗಿಲ್ಲ ಎಂಬ ಪ್ರಶ್ನೆಯನ್ನು ಸಾರ್ವಜನಿಕ ವಲಯದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.

ಇದೇ ಜೀವರಾಜ್ ಶಾಸಕರಾಗಿದ್ದಾಗ ಕಂದಾಯ ಇಲಾಖೆಯ ನೌಕರನಿಗೆ ತಮ್ಮ ಕೈ ರುಚಿಯನ್ನು ತೊರಿಸಿದ್ದರು. ಆಗ ಕಾಂಗ್ರೆಸ್ ಮುಖಂಡರು ಹೊದಲ್ಲಿ ಬಂದಲ್ಲಿ ಜೀವರಾಜ್ ವಿರುದ್ಧ ಪ್ರತಿಭಟನೆ ನಡೆಸಿತ್ತು. ಜೀವರಾಜ್ ನಡೆಯನ್ನು ಖಂಡಿಸಿತ್ತು. ಅಂದು ಜೀವರಾಜ್ ಮೇಲೆ ಬಂದ ಆರೋಪ ಇಂದು ಕಾಂಗ್ರೆಸ್ ಮುಖಂಡರ ಮೇಲೆ ಬಂದಿದ್ದರೂ, ಪ್ರತಿಭಟನೆ ನಡೆಸದೇ ಸುಮ್ಮನೆ ಇರಲು ಕಾರಣವೇನು ಎಂಬ ಪ್ರಶ್ನೆ ಕಾರ್ಯಕರ್ತರನ್ನು ಕಾಡುತ್ತಿದ್ದೆ.

ರಾಜ್ಯದಲ್ಲಿ‌ ಬಿಜೆಪಿ ಅಧಿಕಾರದಲ್ಲಿ ಇದ್ದರೂ ಕ್ಷೇತ್ರದಲ್ಲಿ ವಿರೋಧ ಪಕ್ಷದಲ್ಲಿ‌ ಬಿಜೆಪಿ ಇದೆ ಎಂಬುದು ಮರೆತು ವರ್ತಿಸುತ್ತಿದೆ. ಇದು ಮುಂದಿನ ಚುನಾವಣೆಯ ಮೇಲೆ ಪರಿಣಾಮ ಬಿದ್ದರೂ ಅನುಮಾನವಿಲ್ಲ.

Post a Comment

1 Comments