ಚಿಕ್ಕಮಗಳೂರು: ನಾವು ಪರಿಸರ ವಿರೋಧಿಗಳಲ್ಲ, ಯೋಜನೆ ವ್ಯಾಪ್ತಿಯ ಗ್ರಾಮಗಳಲ್ಲಿ ಜನವಸತಿ ಪ್ರದೇಶ, ಸ್ಮಶಾನ, ಗೋಮಾಳ, ಸಾರ್ವಜನಿಕ ಉಪಯೋಗಕ್ಕೆ ಜಮೀನು, ನಮೂನೆ 53, 57 ಮತ್ತು 94ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಅರ್ಜಿಗಳ ವಿಲೇವಾರಿ ನಂತರ ಯೋಜನೆ ಜಾರಿ ಮಾಡಲಿ, ನಮ್ಮ ವಿರೋಧವಿಲ್ಲ. ಆದರೆ ಇದನ್ನು ಮೀರಿ ಯೋಜನೆ ಜಾರಿಗೆ ತಂದರೆ. ಎನ್‌ಎಂಡಿಸಿ ಬಳಿ ನಾವು ಕುಳಿತುಕೊಳ್ಳುತ್ತೇವೆ. ನಮ್ಮ ಹೆಣದ ಮೇಲೆ ಯೋಜನೆ ರೂಪಿಸಿ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಅಜಾದ್ ಪಾರ್ಕ್ ವೃತ್ತದಲ್ಲಿ ಮುಳ್ಳಯ್ಯನಗಿರಿ ಮೀಸಲು ಅರಣ್ಯ ಪ್ರದೇಶ ಘೋಷಣೆಯನ್ನು ವಿರೋಧಿಸಿ ಮುಳ್ಳಯ್ಯನಗಿರಿ ಮೀಸಲು ಅರಣ್ಯ ಪ್ರದೇಶ ಘೋಷಣೆ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಈ ವ್ಯಾಪ್ತಿಯ ವಿವಿಧ ಗ್ರಾಮಗಳ ಗ್ರಾಮಸ್ಥರು ಪ್ರತಿಭಟನೆ ಹಮ್ಮಿಕೊಂಡಿದ್ದರು.
ಹೋರಾಟ ಸಮಿತಿ ಸಂಚಾಲಕ ವಿಜಯ್ ಕುಮಾರ್ ಮಾತನಾಡಿ, ಮುಳ್ಳಯ್ಯನಗಿರಿ ಮೀಸಲು ಅರಣ್ಯ ಪ್ರದೇಶ ಘೋಷಣೆ ಮಾಡುವಂತೆ ಯಾರು ಕೇಳಿಲ್ಲ, ಪರಿಸರವಾದಿಗಳ ಷಡ್ಯಂತರದಿಂದ ಅನೇಕ ವರ್ಷಗಳಿಂದ ಬಾಳಿ ಬದುಕಿದ್ದ ಜನ ಇಂದು ಬೀದಿಗೆ ಬೀಳಬೇಕಾಗಿದೆ. ನಮ್ಮನ್ನು ಆಳುವ ಸರ್ಕಾರ ನಮ್ಮ ಸಮಸ್ಯೆಗಳನ್ನು ಕೇಳದೆ ಜನ ವಿರೋಧಿ ಯೋಜನೆಗಳನ್ನು ತರುತ್ತಿದೆ ಎಂದು ದೂರಿದರು.
ಯೋಜನೆ ಜಾರಿಯಿಂದ ಧಾರ್ಮಿಕ ಆಚರಣೆ ಮತ್ತು ಪ್ರವಾಸೋದ್ಯಮಕ್ಕೆ ತೊಡಕಾಗಲಿದೆ. ಬೆಳೆಗಾರರಿಗೂ ಸಂಕಷ್ಟ ಎದುರಾಗಲಿದೆ. ಯೋಜನೆ ಅನುಷ್ಠಾನದ ಕುರಿತು ಕ್ಯಾಬಿನೆಟ್ ಮುಂದಿದ್ದು, ಇದು ಮಲೆನಾಡಿಗರ ಜೀವನದ ಪ್ರಶ್ನೆ ಎಂದರು.
ಹೋರಾಟ ಸಮಿತಿ ಸಂಚಾಲಕ ರಘು ಮಾತನಾಡಿ, ಮುಳ್ಳಯ್ಯನಗಿರಿ ಮೀಸಲು ಅರಣ್ಯ ಪ್ರದೇಶ ಘೋಷಣೆಯನ್ನು 20ಸಾವಿರ ಎಕರೆ ಪ್ರದೇಶವನ್ನು ಆರಂಭದಲ್ಲಿ ಮೀಸಲುಪಟ್ಟಿಗೆ ಸೇರಿಸಲಾಗಿತ್ತು. ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಿ.ಟಿ.ರವಿ ಅವರು ಮತ್ತೋಮ್ಮೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಮೀಕ್ಷೆ ನಡೆಸಿ ಜನಾಭಿಪ್ರಾಯ ಸಂಗ್ರಹಿಸುವಂತೆ ಸೂಚಿಸಿದ್ದರು.
1 Comments
The handicapping and odds information found on SportsBettingDime.com is strictly for entertainment functions. Furthermore, the distinctive odds we produce in select information articles are also for amusement, and are not out there to be wagered on. Please examine the net gambling laws in your jurisdiction before placing any wagers with 점보카지노 the betting websites advertised on SportsBettingDime.com, as they do range.
ReplyDelete