Facebook

header logo

ಚಿಕ್ಕಮಗಳೂರು: ಇಸ್ಪೀಟ್ ಜೂಜಾಟ ವೇಳೆ ಪೊಲೀಸ್ ದಾಳಿ.! ಹತ್ತು ಜನ ವಶಕ್ಕೆ


ಜಾಹೀರಾತು/Advertisment

ಚಿಕ್ಕಮಗಳೂರು: ಕೆಲಸವಿಲ್ಲದೆ ಖಾಲಿಯಿರುವವರು, ಹಣ ದ್ವಿಗುಣಗೊಳಿಸಿಕೊಳ್ಳುವಲ್ಲಿ ವಾಮಮಾರ್ಗ ಹುಡುಕಿ ಹೋಗುವವರು, ಹಲವು ಕಾರಣಗಳಿಂದ ಹತಾಶರಾಗಿ ಕುಡಿತ, ಜೂಜು ಅಂಟಿಸಿಕೊಂಡವರು ಹೀಗೆ ಹಲವು ಕಾರಣಗಳ ಮುಂದಿಟ್ಟು ದುಶ್ಚಟಗಳಿಗೆ ದಾಸರಾದವರ ಪಟ್ಟಿ ದೊಡ್ಡದಿದೆ.

ಬುಧವಾರ ಇಂದಾವರ ಗ್ರಾಮದ ಜೆ.ಕೆ. ಹೋಂ ಸ್ಟೇ ಬಳಿ ಇಸ್ಪೀಟ್ ಜೂಜು ನಡೆಯುತ್ತಿದೆಯೆಂಬ ಖಚಿತ ಮಾಹಿತಿ ದೊರೆತ ಮೇರೆಗೆ, ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ, ಮರೆಯಲ್ಲಿ ನಿಂತು ಎಲ್ಲವನ್ನೂ ಅವಲೋಕಿಸಿ, ಖಚಿತಪಡಿಸಿಕೊಂಡು ನಂತರ ಜೂಜಾಡುತ್ತಿದ್ದ, ಪಾರ್ಕಿಂಗ್ ಲೈಟ್ ಇದ್ದ ಮೈದಾನಕ್ಕೇ ತೆರಳಿ ಜೂಜಾಟದಲ್ಲಿ ತೊಡಗಿದ್ದ ಹತ್ತು ಯುವ ಮಂದಿಯ ಮಾಹಿತಿ ಪಡೆದು, ಜೂಜಾಟದಲ್ಲಿ ಬಳಕೆಯಾದ ಹಣ, ಜಮಖಾನವನ್ನು ಅಮಾನತ್ತಿನಲ್ಲಿರಿಸಿಕೊಂಡು ಮುಂದಿನ ಕ್ರಮಕ್ಕಾಗಿ ನ್ಯಾಯಾಲಯದ ಅನುಮತಿ ಕೋರಲಾಗಿದ್ದು. ಜೂಜಿನಲ್ಲಿ ಭಾಗಿಯಾದವರೆಲ್ಲರೂ ಚಿಕ್ಕಮಗಳೂರು ತಾಲ್ಲೂಕಿಗೆ ಸೇರಿದವರೆಂದು ತಿಳಿದು ಬಂದಿದೆ.

Post a Comment

1 Comments