ಶೃಂಗೇರಿ: ತಾಲ್ಲೂಕಿನ ಉಳುವೆ ಗ್ರಾಮದ ರಘು ಅವರ ತೋಟದಲ್ಲಿ ಸುಮಾರು ಹತ್ತು ಅಡಿಗಳಿಗಿಂತಲೂ ಉದ್ದವಾದ ಹೆಬ್ಬಾವು, ಕುರಿಮರಿಯನ್ನು ನುಂಗಿ ಹಿಗ್ಗಿದ ದೇಹ ಗಾತ್ರದಿಂದ ಅಲ್ಲೇ ಮಲಗಿತ್ತು. ಇದನ್ನು ಗಮನಿಸಿದವರು ಉರಗ ತಜ್ಞ ಸ್ನೇಕ್ ಅರ್ಜುನ್ ಅವರಿಗೆ ವಿಷಯ ತಿಳಿಸಿ ಬರಮಾಡಿಕೊಂಡರು. ಹೀಗೆ ಮಲಗಿದ್ದ ಹೆಬ್ಬಾವನ್ನು ಸ್ನೇಕ್ ಅರ್ಜುನ್ ಅವರು ಸುರಕ್ಷಿತವಾಗಿ ಸೆರೆ ಹಿಡಿದು, ಕೆರೆಕಟ್ಟೆ ಅರಣ್ಯ ಪ್ರದೇಶಕ್ಕೆ ಬಿಟ್ಟರು.
ಜೊರ್ರನೆ ಮಳೆ ಸುರಿಯಬೇಕಾಗಿದ್ದ ಸಮಯದಲ್ಲಿ ಮಲೆನಾಡಿನಲ್ಲಿ ಬೇಸಿಗೆ ವಾತಾವರಣವಿದೆ. ಕಾಡಿನ ನಾಶ ಹಾಗೂ ಇನ್ನಿತರೆ ತಾಂತ್ರಿಕ, ವೈಜ್ಞಾನಿಕ ಕಾರಣಗಳಿಂದ ಅರಣ್ಯ ಪ್ರದೇಶದ ವ್ಯಾಪ್ತಿ ಕಡಿಮೆಯಾಗಿ, ಬಹತ್ ಗಾತ್ರದ ಹಾವು, ವಿಷ ಜಂತುಗಳು, ಕಾಡು ಪ್ರಾಣಿಗಳು ನೀರು, ಆಹಾರವನ್ನರಸಿ ತಮ್ಮ ತಮ್ಮ ಮೂಲ ಸ್ಥಾನಗಳ ಆಕ್ರಮಣ ಮಾಡಿ ನಾಡಾಗಿಸಿಕೊಂಡ ಮಾನವರತ್ತ ಧಾವಿಸಿ ಬರುತ್ತಿರುವುದು ಸಾಮಾನ್ಯವಾಗಿದೆ.
1 Comments
😅 Nimma News Slow na
ReplyDelete