Facebook

header logo

ಮಳೆಯ ಅಬ್ಬರ! ಅಂಗಡಿಯೊಳಗೆ ನುಗ್ಗಿದ ನೀರು : ವಿದ್ಯುತ್ ಕಂಬ ಬಿದ್ದು ಆಟೋ ಜಖಂ


ಜಾಹೀರಾತು/Advertisment

ಕೊಟ್ಟಿಗೆಹಾರ: ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಬಣಕಲ್ ಮುಖ್ಯ ರಸ್ತೆ ಬದಿಯ ಕೆಲ ಅಂಗಡಿಗಳಿಗೆ ಮಳೆ ನೀರು ನುಗ್ಗಿ ವರ್ತಕರು ಪರದಾಡುವಂತಾಯಿತು.‌ ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಿಂದ ಕೊಟ್ಟಿಗೆಹಾರದವರೆಗೆ ರಸ್ತೆ ಅಗಲೀಕಣ ಕಾಮಗಾರಿ‌ ನಡೆಯುತ್ತಿದ್ದು ಬಣಕಲ್ ಪಟ್ಟಣದಲ್ಲಿ ರಸ್ತೆ ಇಬ್ಬದಿ ಬಾಕ್ಸ್ ಚರಂಡಿ ಕಾರ್ಯ ಪೂರ್ಣಗೊಳ್ಳದೆ ಇರುವುದರಿಂದ ಮಳೆ ನೀರು ರಸ್ತೆ ಬದಿಯ ಅಂಗಡಿಗಳಿಗೆ ನುಗ್ಗುತ್ತಿದೆ. ಇದರಿಂದಾಗಿ ಮಳೆ ಬಂದಾಗ ಅಂಗಡಿಗಳ ವರ್ತಕರು ಪರದಾಡುವಂತಾಗಿದೆ.

ವಿಲ್ಲುಪುರಂ ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಬ್ಬೇನಹಳ್ಳಿ ಸಮೀಪ ಆಟೋವೊಂದರ ಮೇಲೆ ವಿದ್ಯುತ್ ಕಂಬ ಬಿದ್ದು ಆಟೋ ಜಖಂಗೊಂಡ ಘಟನೆ ನಡೆದಿದೆ. ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿಗಳು ಆಗಮಿಸಿದ್ದು ರಸ್ತೆಗೆ ಬಿದ್ದ ವಿದ್ಯುತ್ ಕಂಬವನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ರಸ್ತೆಗೆ ವಿದ್ಯುತ್ ಕಂಬ ಉರುಳಿರುವುದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.

Post a Comment

1 Comments

  1. Olledaithu jana question madala andre hege neer yella kade nuguthe

    ReplyDelete