ಮೂಡಿಗೆರೆ: ಶಾಲೆ, ಕಾಲೇಜುಗಳಲ್ಲಿ ಶ್ರೀಮಂತ, ಬಡವ, ಜಾತಿ, ಬೇಧ, ಭಾವ ಯಾವುದೂ ಇರಬಾರದೆಂದು ಸಮವಸ್ತ್ರ ಮಾಡಲಾಗಿದೆ. ಅದನ್ನು ಪ್ರತಿ ವಿದ್ಯಾರ್ಥಿಗಳು ಪಾಲಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್‍ಕಟೀಲ್ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿದ್ಯಾರ್ಥಿಗಳು ಹಿಜಾಬ್ ಮುಖ್ಯವೋ ಅಥವಾ ಶಿಕ್ಷಣ ಮುಖ್ಯವೋ ಎಂಬುದನ್ನು ಅವರೇ ಅರ್ಥ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಎಲ್ಲೆಡೆ ಹಿಜಾಬ್ ಸದ್ದು ನಡೆಯುತ್ತಿದೆ. ದೇಶದಲ್ಲಿ ಸಂವಿಧಾನ, ನಿಯಮ, ಕಾನೂನು ಇದೆ. ಅದನ್ನು ಪಾಲನೆ ಮಾಡುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ. ಧರ್ಮ, ಸಂಸ್ಕಂತಿ, ಪರಂಪರೆಯನ್ನು ಮನೆ, ಮಂದಿರದಲ್ಲಿ ಆಚರಿಸುವುದರಲ್ಲಿ ತಮ್ಮ ವಿರೋಧವಿಲ್ಲ. ಆದರೆ ಪವಿತ್ರವಾದ ಶಿಕ್ಷಣ ಕ್ಷೇತ್ರದಲ್ಲಿ ಇವುಗಳನ್ನೆಲ್ಲಾ ತರುವುದು ಸರಿಯಲ್ಲವೆಂದು ನುಡಿದರು.
ಶಿವಮೊಗ್ಗದಲ್ಲಿ ನಡೆದ ಹರ್ಷನ ಹತ್ಯೆ ಖಂಡನೀಯ. ಈಗಾಗಲೇ ಇಬ್ಬರು ಆರೋಪಿಯನ್ನು ಬಂಧಿಸಲಾಗಿದೆ. ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆಂಬ ಮಾಹಿತಿಯನ್ನು ಪೊಲೀಸ್ ಇಲಾಖೆಯಿಂದ ಪಡೆದುಕೊಳ್ಳಲಾಗಿದೆ. ಕೃತ್ಯದ ಹಿಂದೆ ರಾಷ್ಟ್ರಮಟ್ಟದ ಕಾಣದ ಕೈಗಳ ಕೈವಾಡವಿರುವ ಶಂಕೆಯಿದೆ ಎಂದರು.
ಮುಂಬೈನಲ್ಲಿ ಇಂತಹ ಘಟನೆ ನಡೆದಾಗ ಹಂತಕರನ್ನು ಧಮನ ಮಾಡಲಾಗಿತ್ತು. ಅದೇ ರೀತಿಯಲ್ಲಿ ಆರೋಪಿಗಳ ಅಟ್ಟಹಾಸ ಬಗ್ಗುಬಡಿಯಲು ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್ ತಮ್ಮ ಆಡಳಿತ ಪಕ್ಷದ ವೈಫಲ್ಯ ಹಾಗೂ ಸಾರ್ವಜನಿಕರ ಕುಂದು ಕೊರತೆ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡುವುದನ್ನು ಬಿಟ್ಟು, ಕೆಲಸಕ್ಕೆ ಬಾರದ ವಿಚಾರವನ್ನೇ ಚರ್ಚಿಸಿ ಕಾಲಹರಣ ಮಾಡುವ ಮೂಲಕ ರಾಜ್ಯದ ಜನತೆಗೆ ದ್ರೋಹ ಬಗೆಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್‍ನವರಿಗೆ ನಾಯಕತ್ವದಲ್ಲೇ ಗೊಂದಲವಿದೆ. ಹಿಜಾಬ್ ಬಗ್ಗೆ ಚರ್ಚಿಸಲು ಹೋದರೆ ಕಾಂಗ್ರೆಸ್ ಸೋಲುತ್ತೆ. ಬಿಜೆಪಿ ಪಕ್ಷದ ಆಡಳಿತದಲ್ಲಿ ಪೈಫಲ್ಯತೆ ಸಿಗದೇ ಈಗ ಈಶ್ವರಪ್ಪ ಅವರ ವಿಚಾರ ತೆಗೆದುಕೊಂಡಿದ್ದಾರೆಂದು ಹೇಳಿದರು.
ಕಾಂಗ್ರೆಸ್ ಪಕ್ಷ ರಾಜ್ಯದ ಜನರ ಸಮಸ್ಯೆ ನಿವಾರಣೆ ಕುರಿತು ಚರ್ಚೆಬೇಕಾಗಿಲ್ಲ. ಬದಲಾಗಿ ಟೀಕೆಯಲ್ಲಿಯೇ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಇದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆಂದು ತಿಳಿಸಿದರು.
1 Comments
Gambling in Las Vegas - Mapyro
ReplyDeleteVegas gambling in Las Vegas is 평택 출장샵 legal in 서산 출장샵 in the United States, and Las Vegas 나주 출장마사지 is officially the US's first state 공주 출장샵 to legalize sports 진주 출장마사지 betting.